Belagavi

ಬೆಳಗಾವಿ: ವಾರ್ಡ್ 53ರಲ್ಲಿ ಉದ್ಯಾನವನ ಕಾಮಗಾರಿಗೆ ವಿರೋಧ

Share

ಬೆಳಗಾವಿಯ ವಾರ್ಡ್ ನಂ 53ರ ವೃಂದಾವನ ಕಾಲನಿಯ ಉದ್ಯಾನವನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯು ಅನಧಿಕೃತ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ನಗರಸೇವಕರೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಗರಸೇವಕ ಶ್ರೀಶೈಲ್ ಕಾಂಬಳೆ, ಇದು ಪಾಲಿಕೆ ಅನುದಾನದಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಕೈಗೊಂಡ ಅಧಿಕೃತ ಕಾಮಗಾರಿಯಾಗಿದ್ದು, ಕೊನೆಯ ಹಂತದಲ್ಲಿ ವಿನಾಕಾರಣ ವಿರೋಧಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 53ರ ವೃಂದಾವನ ಕಾಲನಿಯ ಉದ್ಯಾನವನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅನಧಿಕೃತ ಕಾಮಗಾರಿ ಎಂದು ವಿರೋಧಿಸಿ ಸ್ಥಳಕ್ಕೆ ಆಗಮಿಸಿದ್ದ ನಗರಸೇವಕ ಶ್ರೀಶೈಲ್ ಕಾಂಬಳೆ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಉದ್ಯಾನವನದಲ್ಲಿ ಮರಗಿಡಗಳು ಕಡಿಮೆ ಇರುವ ಕಾರಣ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಮಕ್ಕಳು ಮತ್ತು ವಯೋವೃದ್ಧರಿಗಾಗಿ ಶೆಡ್ ನಿರ್ಮಿಸಲಾಗುತ್ತಿದ್ದು, ಸ್ಥಳೀಯರ ಬೇಡಿಕೆಯಂತೆ ಪರಿಷತ್ತಿನಲ್ಲಿ ಅನುಮೋದನೆ ಪಡೆದು ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ನಗರಸೇವಕ ಶ್ರೀಶೈಲ್ ಕಾಂಬಳೆ, ಉದ್ಯಾನವನದಲ್ಲಿ ಓಪನ್ ಜಿಮ್, ಆಸನ ವ್ಯವಸ್ಥೆ, ಬೆಂಚ್, ವಾಕಿಂಗ್ ಟ್ರ್ಯಾಕ್ ಹಾಗೂ ದಿನಪತ್ರಿಕೆ ಓದಲು ಅವಕಾಶ ಕಲ್ಪಿಸುವ ಸದುದ್ದೇಶದಿಂದ ಈ ಕಾಮಗಾರಿ ನಡೆಸಲಾಗುತ್ತಿದೆ ಎಂದಿದ್ದಾರೆ. ಕಾಮಗಾರಿ ಪ್ರಾರಂಭವಾದಾಗ ಮೌನವಾಗಿದ್ದು, ಈಗ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಕೆಲ ಕುಟುಂಬಗಳು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:

error: Content is protected !!