Belagavi

ಲೈನ್‌ಮನ್‌ಗಳ ಮೇಲಿನ ಹಲ್ಲೆ ಆರೋಪ ಸಾರಾಸಗಟು ತಳ್ಳಿಹಾಕಿದ ಮಾಜಿ ಸಚಿವೆ ಹೆಬ್ಬಾಳ್ಕರ್

Share

ಬೆಳಗಾವಿಯಲ್ಲಿ ಲೈನ್‌ಮನ್‌ಗಳ ಮೇಲಿನ ಹಲ್ಲೆ ಆರೋಪಕ್ಕೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಸಹೋದರನ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಪೌರಕಾರ್ಮಿಕರು ಮತ್ತು ಲೈನ್‌ಮನ್‌ಗಳ ಕಲ್ಯಾಣಕ್ಕಾಗಿ ತಮ್ಮ ಕುಟುಂಬ ಸದಾ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪೌರಕಾರ್ಮಿಕರು ಮತ್ತು ಲೈನ್‌ಮನ್‌ಗಳ ಸೇವೆಗೆ ಅಪಾರ ಗೌರವವಿದೆ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದು, ತಮ್ಮ ಸಹೋದರನ ವಿರುದ್ಧ ಲೈನ್‌ಮನ್‌ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕಡ್ಡಾಯ ರಜೆಗೆ ಕಳುಹಿಸಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ ಲೈನ್‌ಮನ್‌ಗಳು ಹಾಗೂ ಪೌರ ಕಾರ್ಮಿಕರ ಸೇವೆಗೆ ನನಗೆ ಅಪಾರ ಗೌರವವಿದೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ” ಎಂದರು.ತಮ್ಮ ಸಹೋದರನ ವಿರುದ್ಧ ಮಾಡಲಾಗುತ್ತಿರುವ ಕೆಲವು ಆರೋಪಗಳನ್ನು ನಿರಾಕರಿಸಿದ ಅವರು, ಲೈನ್‌ಮನ್‌ವೊಬ್ಬರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿದೆ ಅಥವಾ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದರು. ಲೈನ್ ಮನ್ ಗಳಿಗೆ ನಾವು ಗರಿಷ್ಠ ಸಹಾಯ ಮಾಡಿದ್ದೇವೆ. ಅವರ ಬಗ್ಗೆ ಕಾಳಜಿ, ಕನಿಕರವಿದೆ. ಅವರಿಗೆ ಮಳೆಗಾಲದ ವೇಳೆ ಅಗತ್ಯ ಪರಿಕರಗಳನ್ನು ವಿತರಿಸಿದ್ದೇವೆ. ಕಂಬದಿಂದ ಬಿದ್ದು 9 ವರ್ಷಗಳಿಂದ ಹಾಸಿಗೆ ಹಿಡಿದಿರುವ ಲೈನ್ ಮನ್ ಗೆ 18 ಲಕ್ಷ ರೂ ಪರಿಹಾರ ಕೊಡಿಸಿದ್ದೇನೆ. ಅವರ ಪತ್ನಿಗೆ ಕೆಲಸ ಕೊಡಿಸಿದ್ದೇನೆ. ರೈತರಿಗಾಗಿ ಕೆಲಸ ಮಾಡಿಸುವಾಗ ಕೆಲವೊಮ್ಮೆ ಜೋರಾಗಿ ಮಾತನಾಡಿರಬಹುದು. ಆದರೆ ಯಾರಿಗೂ ಹಲ್ಲೆ ಮಾಡುವಂತಹ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಅವರು ಹೇಳಿದರು.

Tags:

error: Content is protected !!