Belagavi

ಶಿವಶರಣ ಕಾಯಕಯೋಗಿ ಹೂಗಾರ ಮಾದಯ್ಯನವರ ಜಯಂತಿಯ ನಿಮಿತ್ಯ ಭವ್ಯ ಮೆರವಣಿಗೆ

Share

ಬೆಳಗಾವಿಯಲ್ಲಿ ಶಿವಶರಣ ಕಾಯಕಯೋಗಿ ಮಾದಯ್ಯನವರ ಜಯಂತಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾಗವಾಡ ಅಜ್ಜ ಹಾಗೂ ಮಾಜಿ ಶಾಸಕ ವಿ.ಐ. ಪಾಟೀಲರು ಮೆರವಣಿಗೆಗೆ ಚಾಲನೆ ನೀಡಿದ್ದು, ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಈ ಕಾರ್ಯಕ್ರಮ ವೇದಿಕೆಯಾಗಿದೆ.

ಬೆಳಗಾವಿ ಜಿಲ್ಲೆಯ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ವತಿಯಿಂದ ಶಿವಶರಣ ಕಾಯಕಯೋಗಿ ಮಾದಯ್ಯನವರ ಜಯಂತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿದ್ದು, ಈ ಹಿನ್ನೆಲೆ ನಗರದ ರಾಣಿ ಚನ್ನಮ್ಮ ವೃತ್ತದಿಂದ ಮಾದಯ್ಯನವರ ಭಾವಚಿತ್ರವಿರುವ ಭವ್ಯ ಮೆರವಣಿಗೆಗೆ ಕಾಗವಾಡ ಅಜ್ಜ ಹಾಗೂ ಮಾಜಿ ಶಾಸಕ ವಿ.ಐ. ಪಾಟೀಲರು ಚಾಲನೆ ನೀಡಿದರು. ಈ ಮೆರವಣಿಗೆಯು ರಾಣಿ ಚೆನ್ನಮ್ಮ ವೃತ್ತ, ಡಾ. ಅಂಬೇಡ್ಕರ್ ರಸ್ತೆ, ಅಯೋಧ್ಯಾನಗರ ಮತ್ತು ಕೊಲ್ಹಾಪುರ ವೃತ್ತದ ಮಾರ್ಗವಾಗಿ ಸಾಗಿ ಕುಮಾರ ಗಂಧರ್ವ ಕಲಾ ಮಂದಿರವನ್ನು ತಲುಪಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಜಾನಪದ ಕಲಾಪಥಕಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.


ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಮುಖ್ಯ ಕಾರ್ಯಕ್ರಮದ ಸಾನ್ನಿದ್ಯವನ್ನು ಶ್ರೀ ಯತೀಶ್ವರಾನಂದ ಸ್ವಾಮೀಜಿ ವಹಿಸಿದ್ದರು. ಸಂಘಟನೆ ಮತ್ತು ಪ್ರಗತಿಯ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ, ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಹೂಗಾರ, ಸಮುದಾಯದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿದರು. ಹೂಗಾರ ಮಾದಯ್ಯನವರ ಜಯಂತಿಯನ್ನು ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲೇ ಆಚರಿಸಬೇಕು, ಹೂಗಾರ ಸಮಾಜದ ನಿಗಮ ಮಂಡಳಿಗೆ ಕೂಡಲೇ ಚಾಲನೆ ನೀಡಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಸಮಾಜದ ಭವನ ನಿರ್ಮಾಣಕ್ಕಾಗಿ 20 ಗುಂಟೆ ಜಮೀನು ಮಂಜೂರು ಮಾಡಬೇಕೆಂದು ಅವರು ಪ್ರಮುಖವಾಗಿ ಒತ್ತಾಯಿಸಿದರು.
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗಿಯಾಗಿದ್ಧರು.

Tags:

error: Content is protected !!