ಬೆಳಗಾವಿಯ ಶ್ರೀಂಗಾರಿ ಕಾಲನಿ, ಬಾಡಿವಾಲೆ ಕಾಲನಿ ಹಾಗೂ ಟೀಚರ್ಸ್ ಕಾಲನಿಯ ಸಾರ್ವಜನಿಕ ಗಣೇಶೋತ್ಸವ ಮಂಡಳದ ವತಿಯಿಂದ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಶ್ರೀಂಗಾರಿ ಕಾಲೋನಿ, ಬಾಡಿವಾಲೆ ಕಾಲೋನಿ ಹಾಗೂ ಟೀಚರ್ಸ್ ಕಾಲೋನಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ವತಿಯಿಂದ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಉಪಕ್ರಮಗಳೊಂದಿಗೆ ಗಣೇಶೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಹಳದಿ-ಕುಂಕುಮ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಶಾಸಕ ಅಭಯ ಪಾಟೀಲ್ ಅವರ ಪತ್ನಿ ಪ್ರೀತಿ ಪಾಟೀಲ್, ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ್ ಹಾಗೂ ಮೀನಾ ಬೆನಕೆ ಅವರ ಪ್ರಮುಖ ಉಪಸ್ಥಿತಿಯಲ್ಲಿ ಸುಮಾರು 750 ಮಹಿಳೆಯರು ಭಾಗವಹಿಸಿದ್ದರು. ಜತೆಗೆ ಸತ್ಯನಾರಾಯಣ ಮಹಾಪೂಜೆ, ವಿಷ್ಣು ಸಹಸ್ರನಾಮ ಜಪ, ಅನ್ನಪೂರ್ಣೇಶ್ವರಿ ಮಂತ್ರ, ಮಹಾಆರತಿ ಹಾಗೂ ಬೃಹತ್ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿತು.ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಅವರ ಶುಭ ಹಸ್ತದಿಂದ ಮಹಾಪ್ರಸಾದ ವಿತರಿಸಲಾಗಿದ್ದು, ಈ ವೇಳೆ ವಿನಾಯಕ ಕಾಮಕರ್, ಪ್ರವೀಣ್ ಪಿಳಣಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಕ್ಕಳಿಗಾಗಿ ಫಿಟ್ ಇಂಡಿಯಾ ವಾಕಿಂಗ್ ರೇಲಿ, ರನ್ನಿಂಗ್ ಸ್ಪರ್ಧೆ ಹಾಗೂ ಕ್ಯಾರಮ್, ಚೆಸ್, ಕ್ರಿಕೆಟ್, ಫುಟ್ಬಾಲ್, ಚಿತ್ರಕಲೆ, ಡಾನ್ಸ್ ಮತ್ತು ಹಾಡುಗಾರಿಕೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಂಡಳಿಯ ಅಧ್ಯಕ್ಷ ವಿನಾಯಕ ಕಾಕತೀಕರ್ ಹಾಗೂ ವಿಕೇತಾ ಕಾಕತೀಕರ್ ಅವರ ಪೂಜೆಯೊಂದಿಗೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ದತ್ತಾ ಜಾಧವ, ಚಂದ್ರಕಾಂತ ಕೊಂಡುಸ್ಕರ್, ಸುರೇಶ್ ವೀರ್ಗೌಡರ್, ಆರ್.ಎಸ್.ಎಸ್. ನ ರೇವಣಕರ್, ರಂಜಿತ್ ಮನೋಳ್ಕರ್, ಪರಾಗಿ ಸೇರಿದಂತೆ ಅನೇಕರು ಆಗಮಿಸಿ ಸಹಕರಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಸ್ವಾಗತ ಅಧ್ಯಕ್ಷ ಅಡ್ವೋಕೇಟ್ ಶಿವಕುಮಾರ್ ಉಡಕೇರಿ, ತುಕಾರಾಮ ಶಿಂಧೆ, ಗಣಪತ್ ವಡೇರ್ ಗುರುಜಿ, ಜೋಶಿ ಗುರುಜಿ, ಸೂರ್ಯಕಾಂತ ಹಿಂದಲಗೇಕರ್, ವಿಶ್ವನಾಥ ಯೆಳೂರಕರ್ ಸೇರಿದಂತೆ ಮಂಡಳಿಯ ಇತರ ಕಾರ್ಯಕರ್ತರು ಅಪಾರ ಶ್ರಮ ವಹಿಸಿದರು.
