ಆ್ಯಂಕರ್- ರಸ್ತೆ ಬದಿಯಲ್ಲಿ ಪಂಚರ್ ಆಗಿದ್ದ ಲಾರಿಯ ಟೈರ ಬದಲ್ಲಿಸುತ್ತಿದ್ದ ಮೇಲೆ ಬಲೆರೋ ವಾಹನವೊಂದು ಏಕಾಏಕಿ ಎರಗಿ ಬಂದು ಅಫಘಾತ ಮಾಡಿರುಬ ಪರಿಣಾಮ ಇಬ್ಬರು ಸಾವನಪ್ಪಿ, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡದ ಅಮ್ಮಿನಭಾವಿ ಬಳಿ ಸೋಮುವಾರ ಮಧ್ಯ ರಾತ್ರಿ ನಡೆದಿದೆ.

ವೈ- ಸವದತ್ತಿ ಸಕ್ಕರೆ ಕಾರ್ಖಾನೆಯಿಂದ ಧಾರವಾಡದ ಕಡೆಗೆ ಬರುತ್ತಿದ್ದ ಲಾರಿಯೊಂದರ ಚಕ್ರ ಅಮ್ಮಿನಬಾವಿ ಬಳಿ ಪಂಚರ್ ಆಗಿತ್ತು. ಲಾರಿ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಮೂವರು ಲಾರಿಯ ಟೈರ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಸವದತ್ತಿ ಕಡೆಯಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಬುಲೆರೊ ಪಿಕಪ್ ವಾಹನವು ರಸ್ತೆ ಬದಿ ನಿಂತು ಟೈರ್ ದುರಸ್ತಿ ಮಾಡುತ್ತಿದ್ದವರ ಮೇಲೆ ಎರಗಿದೆ. ಇದರ ಪರಿಣಾಮ ಧಾರವಾಡ ತಾಲೂಕಿನ ನಿಗದಿ ಗ್ರಾಮದ ರವಿ ದಾಸನಕೊಪ್ಪ ಹಾಗೂ ಬಸವರಾಜ ಹೊಂಡದಕಟ್ಟಿ ಎಂಬುವವರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಟೋ ವಿಶೋಲ್ಸ್ ಫ್ಲೋ
