BELAGAVI

ಗಣೇಶ ವಿಸರ್ಜನೆ ಸಂಭ್ರಮದ ವೇಳೆ ಅನಾಹುತ…. ಪಟಾಕಿ ಸ್ಫೋಟದ ರಭಸಕ್ಕೆ ಕಲ್ಲು ಬಡಿದು ವ್ಯಕ್ತಿಗೆ ಗಾಯ

Share

ಬೇಕಾಬಿಟ್ಟಿಯಾಗಿ ಸಿಡಿಸಿದ ಪಟಾಕಿಗಳಿಂದಾಗಿ 50 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಳಗಾವಿಯ ಮಹಾದ್ವಾರ ರಸ್ತೆಯಲ್ಲಿ ನಡೆದಿದೆ.

ಬೆಳಗಾವಿಯ ಮಹಾದ್ವಾರ ರಸ್ತೆಯ ದತ್ತಮಂದಿರದ ಎದುರು ಗಣೇಶ ವಿಸರ್ಜನೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಆನಂದ್ ಪವಾರ್ (50) ಎಂಬುವವರ ಮೇಲೆ ಪಟಾಕಿ ಸ್ಫೋಟದ ರಭಸಕ್ಕೆ ಹಾರಿದ ದೊಡ್ಡ ಕಲ್ಲು ಬಲವಾಗಿ ಬಡಿದು ಹೊಟ್ಟೆಗೆ ಗಂಭೀರ ಗಾಯವಾಗಿರುವ ಘಟನೆ ಸೆಪ್ಟೆಂಬರ್ 18ರ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿದೆ. ಒಂದು ತಿಂಗಳ ಹಿಂದೆ 24 ಗಂಟೆಯ ನೀರು ಸರಬರಾಜು ಕಾಮಗಾರಿಗಾಗಿ ಅಗೆದು ಬಿಡಲಾಗಿದ್ದ ರಸ್ತೆಯನ್ನು ಸರಿಯಾಗಿ ಡಾಂಬರೀಕರಣ ಮಾಡದೆ, ಕೇವಲ ಕಲ್ಲುಗಳನ್ನು ತುಂಬಿ ನಿರ್ಲಕ್ಷ್ಯ ತೋರಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದಾದರೂ ಇಂತಹ ಅಪಾಯಕಾರಿ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Tags:

error: Content is protected !!