ಬೆಳಗಾವಿಯ ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಗೆ ಭರತೇಶ ಎಜುಕೇಶನ್ ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗಳಿಂದ ಸುಮಾರು 5 ಟನ್ ರದ್ಧಿ ಪುಸ್ತಕ ಹಾಗೂ ಪೇಪರ್‌ಗಳನ್ನು ದೇಣಿಗೆಯಾಗಿ ನೀಡಲಾಗಿದೆ. ಈ ರದ್ಧಿ ಮಾರಾಟದಿಂದ ಬರುವ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಟ್ರಸ್ಟ್‌ನ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಬೆಳಗಾವಿಯ ಭರತೇಶ ಎಜುಕೇಶನ್ ಟ್ರಸ್ಟ್ ಅಡಿಯ ಬಿ.ಸಿ.ಸಿ.ಎ, ಮೋತಿಚಂದ್ ಲೇಂಗಡೆ ಪಾಲಿಟೆಕ್ನಿಕ್, ಮಿರ್ಜಿ ಬಿ.ಐ.ಟಿ ಹಾಗೂ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್ ಸಂಸ್ಥೆಗಳು ಜಂಟಿಯಾಗಿ ಸುಮಾರು 5 ಟನ್ ಹಳೆಯ ಪೇಪರ್ ಹಾಗೂ ಪುಸ್ತಕಗಳನ್ನು ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಗೆ ಹಸ್ತಾಂತರಿಸಿವೆ. ಸಂಗ್ರಹವಾದ ರದ್ಧಿಯನ್ನು ಮಾರಿ, ಅದರಿಂದ ಬರುವ ಹಣದ ಮೂಲಕ ಬೆಳಗಾವಿಯ ಅರ್ಹ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯ ನಿರ್ದೇಶಕ ಅಲನ್ ವಿಜಯ್ ಮೋರೆ, ರದ್ಧಿ ಕಾಗದಗಳನ್ನು ಬಡ ಮಕ್ಕಳ ಶಿಕ್ಷಣದ ಆಸರೆಯಾಗಿ ಪರಿವರ್ತಿಸುತ್ತಿರುವ ಈ ಕಾರ್ಯಕ್ಕೆ ಭರತೇಶ ಟ್ರಸ್ಟ್‌ನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನೀಡಿದ ಸತತ ಬೆಂಬಲಕ್ಕೆ ವಿಶೇಷ ಧನ್ಯವಾದ ಅರ್ಪಿಸಿದರು.
