Belagavi

ದೇವಸ್ಥಾನ ಸಂಸ್ಕೃತಿಯಿಂದ ವಿಶ್ವವನ್ನೇ ತನ್ನತ್ತ ಸೆಳೆದ ಭವ್ಯ ರಾಷ್ಟ್ರ ನಮ್ಮದು; ಮನೋಹರ ಮಠದ

Share

ದೇವಸ್ಥಾನಗಳು ನಮ್ಮ ಬದುಕಿನ ಭವ್ಯ ಸಂಸ್ಕೃತಿಯ ದ್ಯೋತಕ. ಸರ್ವರ ಸಂಸ್ಕಾರ ಗಟ್ಟಿಗೊಳಿಸಿ, ದಿವ್ಯತ್ವವನ್ನು ಕಲ್ಪಿಸುವ ಕೇಂದ್ರ ಗಳು ಹೌದು ಎಂದು ಕರ್ನಾಟಕ ರಾಜ್ಯ ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕರಾದ ಮನೋಹರಜೀ ಮಠದ ಹೇಳಿದರು.


ಅವರು ಭಾನುವಾರ ಬೆಳಗಾವಿ ಬಸವ ಕಾಲಿನಿಯಲ್ಲಿಯ ಬಸವಣ್ಣ ದೇವಸ್ಥಾನದಲ್ಲಿ ಜರುಗಿದ ಬೆಳಗಾವಿ ನಗರ ದೇವಸ್ಥಾನಗಳ ಸಂವರ್ಧನಾ ಸಮಿತಿ ಸಂಯೋಜಕರು ಮತ್ತು ಅರ್ಚಕರ ದ್ವಿತೀಯ ಸಭೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ದೇವಾಲಯಗಳು ಭಕ್ತಿ ಕೇಂದ್ರಗಳ ಜೊತೆಗೆ ಶಕ್ತಿ ಕೇಂದ್ರಗಳು ಆಗಬೇಕು.

ಮೂಡನಂಬಿಕೆಗಳನ್ನು ದೂರಗೊಳಿಸಿ ಮೂಲ ನಂಬಿಕೆಗಳನ್ನು ಬಿತ್ತಿ ಬೆಳೆಸುವ ಕಾರ್ಯ ಮಾಡುವ ಚಟುವಟಿಕೆ ಮಾಡಬೇಕಾಗಿದೆ ಎಂದರು ದೇವಸ್ಥಾನಗಳು ನಿತ್ಯ ಮೌನ , ಧ್ಯಾನ, ಪ್ರಾರ್ಥನೆ , ಭಜನೆ, ಮತ್ತು ಆದ್ಯಾತ್ಮಿಕ ಚಿಂತನ, ಮಂಥನ ಗಳ ಕೇಂದ್ರಗಳಾಗಬೇಕು.
ಸರ್ವರನ್ನು ಒಂದಾಗಿಸಿ, ಪ್ರೀತಿ, ಪ್ರೇಮ ಗಟ್ಟಿಗೊಳಿಸಿ ಧರ್ಮ ಕಟ್ಟುವ ಕುಟೀರಗಳಾಗಬೇಕು. ನಮ್ಮಲ್ಲಿರುವ ಅಸೂಯೆ, ನಿರಾಸೆ ಗಳನ್ನು ಹೊರದೂಡಿ, ಆಶಾ ಭಾವನೆ ತಳೆದು ಎಲ್ಲರೂ ನಮ್ಮವರು ಎಂಬ ಭಾವನೆ ನಮ್ಮದಾಗಬೇಕು ಎಂದರಲ್ಲದೆ, ಗುಡಿ ಜನರ ಜೀವನ ಅಡಿಯಾಗಲು ದೇವಾಲಯಗಳಲ್ಲಿ ಸಾಮಾಜಿಕ ಪರಿವರ್ತನೆಯ 10 ಹಲವು ಚಟುವಟಿಕೆಗಳು ಆರಂಭಿಸಬೇಕಾಗಿದೆ ಎನ್ನುವ ಯೋಜನೆಯನ್ನು ತಿಳಿಸಿದರು. ದೇವಸ್ಥಾನಗಳ ಕಮಿಟಿ ಕಾರ್ಯ ಚಟುವಟಿಕೆಗಳು ಮತ್ತು ಅರ್ಚಕರು ದೇವಸ್ಥಾನಗಳಲ್ಲಿಯ ಆಚಾರ ವಿಚಾರಗಳನ್ನು ತಿಳಿಯಲು, ಮತ್ತು ಪೂಜೆ , ಪುನಸ್ಕಾರಗಳ ಬಗ್ಗೆ ಅರಿಯಲು ಪ್ರತ್ಯೇಕ ಕಾರ್ಯಾಗಾರವೊಂದನ್ನು ರೂಪಿಸಲು ಮುಂಬರುವ ಆಕ್ಟೋಬರ್ ಅಂತ್ಯದಲ್ಲಿ ದಿನ ನಿಗದಿಗೊಳಿಸುವದಾಗಿ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ ಹಿರೇಮಠ ವಹಿಸಿದ್ದರು, ಶ್ರೀ ಶ್ರೀಕಾಂತ್ ಕದಮ್ ಮತ್ತು ಕಲ್ಲಪ್ಪಾ ಗಾಣಿಗೇರ ಭಾಗಿಯಾಗಿದ್ದರು.

ಸಭೆಯಲ್ಲಿ ಉಪಸ್ತಿತರಿದ್ದ ರಾಮತೀರ್ಥನಗರ, ಶ್ರೀನಗರ, ಬಸವಕಾಲನಿ, ಶಿವಬಸವ ನಗರ. ಸೇರಿದಂತೆ ವಿವಿಧ ಬಡಾವಣೆಗಳ ದೇವಾಲಯ ಸಂವರ್ಧನಾ ಸಮಿತಿ ಸದಸ್ಯರಾದ , ಸಿ ವ್ಹಿ ಸವಡಿ , ಸುರೇಶ ಗಣಾಚಾರಿ, , ಎಂ ಸಿ ಪಾಟೀಲ, ಎಸ್ ವ್ಹಿ ದೊಡವಾಡ, ಎಸ್ ಬಿ ಉರ್ಬಿನಟ್ಟಿ, , ಎ ಸಿ ಅಂಗಡಿ, ಬಸವರಾಜ ಕಡೋಲಕರ, ಎ ವಾಯ್ ಧಾಮನೇಕರ, ಬಾಬು ಕುಲಕರ್ಣಿ, ಜಿಲ್ಲಾ ಸಮಿತಿ ಸಂಯೋಜಕ ಸತೀಶ್ ಮಾಳವದೆ, ಶಿವಬಸಪ್ಪಾ ಪಟ್ಟಣ, ಬಸವರಾಜ ಗಾಣಗಿ, ಸೇರಿದಂತೆ ದೇವಸ್ಥಾನಗಳ ಕಮಿಟಿ ಸದಸ್ಯರು, ಸದ್ಭಕ್ತರು ಉಪಸ್ತಿತರಿದ್ದರು. ಸತೀಶ ಮಾಳವಾದೆ, ಸ್ವಾಗತಿಸಿದರು.
ಮಹೇಶ ಮಾವಿನಕಟ್ಟಿ ವಂದಿಸಿದರು.

Tags:

error: Content is protected !!