ಬೆಳಗಾವಿಯ ಸಮರ್ಥ ನಗರದ ಎಸ್.ಟಿ.ಎಂ.ನಲ್ಲಿ ಶ್ರೀ ಏಕದಂತ ಯುವಕ ಮಂಡಳದ ವತಿಯಿಂದ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಸಂಪನ್ನಗೊಂಡಿತು.


ಬೆಳಗಾವಿಯ ಸಮರ್ಥ ನಗರದ ಎಸ್.ಟಿ.ಎಂ.ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ನಿಮಿತ್ಯ ಶ್ರೀ ಏಕದಂತ ಯುವಕ ಮಂಡಳದ ವತಿಯಿಂದ ಭಾನುವಾರ ಸಂಜೆ ವಿಜೃಂಭಣೆಯಿಂದ ಶ್ರೀ ಸತ್ಯನಾರಾಯಣ ಪೂಜೆ, ಮಹಾಆರತಿ ಜರುಗಿತು. ಈ ವೇಳೆ ಗಲ್ಲಿಯ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆರತಿ ತಟ್ಟೆಯೊಂದಿಗೆ ಭಾಗವಹಿಸಿದ್ದರು. ಕೊನ್ವಾಳ ಗಲ್ಲಿಯ ಗಜರಾಜ ಭಜನಿ ಮಂಡಳಿಯವರು ಮಹಾಆರತಿಗೆ ವಿಶೇಷ ಮೆರುಗು ನೀಡಿದರು. ನಂತರ ಭಕ್ತರಿಗೆ ಮಹಾಪ್ರಸಾದ ವತರಣೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಆಗಮಿಸಿದ ವಿವಿಧ ಪ್ರಮುಖ ಗಣ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾತ್ರಿ ತನಕ ನಡೆದ ಮಹಾಪ್ರಸಾದದಲ್ಲಿ ಸುಮಾರು 2500 ಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಗಣೇಶನ ದರ್ಶನಕ್ಕೆ ಆಗಮಿಸಿದ ಸಾರ್ವಜನಿಕರು ಮಹಾಪ್ರಸಾದದ ವ್ಯವಸ್ಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಗಲ್ಲಿಯ ಹಿರಿಯ ನಾಗರಿಕರು, ಮಹಿಳಾ ಮಂಡಳದವರು ಹಾಗೂ ಯುವಕ ಮಂಡಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
