Vijaypura

ಕ್ರೇನ್ ಹುಕ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

Share

ಕ್ರೇನ್‌ನ ಹುಕ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ವಿಜಯಪುರ ನಗರದ ದರ್ಗಾ ರಿಂಗ್‌ರೋಡ್‌ನಲ್ಲಿ ನಡೆದಿದೆ.

ಆಕಾಶ ಪಾಟೀಲ ಎಂಬ ಯುವಕ ಮೃತನಾಗಿದ್ದು, ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹೊರ ರಾಜ್ಯದಿಂದ ಕೂಲಿಗಾಗಿ ವಿಜಯಪುರಕ್ಕೆ ಬಂದಿದ್ದ ಆಕಾಶ, ಕಾಮಗಾರಿ ಸ್ಥಳದ ಶೆಡ್‌ನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಯುವಕನ ಸಾವಿನ ಸುತ್ತ ಅನುಮಾನ ಮೂಡಿದ್ದು, ಆತ್ಮಹತ್ಯೆಯೋ ಅಥವಾ ಸಾವಿಗೆ ಬೇರೆ ಕಾರಣವಿದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಆದರ್ಶ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣ ಪತ್ತೆಗೆ ಮುಂದಾಗಿದ್ದಾರೆ.

Tags:

error: Content is protected !!