Vijaypura

ಮಾಜಿ ಸಿಎಂ ಸಿದ್ಧರಾಮಯ್ಯ ಮೂರ್ತಿ ತೆರವು; ಅಹಿಂದ ಸಂಘಟನೆ ಪ್ರತಿಭಟನೆ

Share

ಕಲಬುರ್ಗಿ ನಗರದಲ್ಲಿ ಹೈಕೋರ್ಟ್ ಎದುರುಗಡೆಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂರ್ತಿಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ವಿಜಯಪುರ ನಗರದಲ್ಲಿ ಅಹಿಂದ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಹಿಂದ ಸಂಘಟನೆಯ ಮುಖಂಡ ಸೋಮನಾಥ್ ಕಳ್ಳಿಮನಿ ಮಾತನಾಡಿ ನಾಡಿಗೆ ಅನೇಕ ಭಾಗ್ಯಗಳನ್ನು ನೀಡಿದಂತಹ ಮಹಾನ್ ವ್ಯಕ್ತಿಯ ಮೂರ್ತಿಯನ್ನು ತೆರವು ಮಾಡುವ ಮೂಲಕ ಸಿದ್ದರಾಮಯ್ಯನವರಿಗೆ ಅಪಮಾನ ಮಾಡಿದ್ದಾರೆ ಕೂಡಲೇ ಮೂರ್ತಿ ತೆರವು ಮಾಡಿದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಮತ್ತೆ ಮರು ಮೂರ್ತಿ ಸ್ಥಾಪನೆ ಮಾಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Tags:

error: Content is protected !!