Belagavi

ಕೆಎಲ್ಎಸ್ ಜಿಐಟಿ ಮಹಿಳಾ ಈಜು ತಂಡಕ್ಕೆ ವಿಟಿಯು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಗರಿಮೆ!

Share

ಬೆಳಗಾವಿಯ ಕೆಎಲ್ಎಸ್ ಜಿಐಟಿ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ಈಜು ತಂಡವು ವಿಟಿಯು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಏಳು ಪದಕಗಳನ್ನು ಗೆದ್ದು ಬೀಗಿರುವ ಸುನಿಧಿ ಹಳಕರೆ ಅಖಿಲ ಭಾರತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ಕೆಎಲ್ಎಸ್ ಜಿಐಟಿ ಕಾಲೇಜಿನ ಮಹಿಳಾ ಈಜು ತಂಡವು ವಿಟಿಯು ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿ ಇತಿಹಾಸ ಬರೆದಿದೆ. ಸಿಎಸ್ಇ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಸುನಿಧಿ ಹಳಕರೆ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಒಟ್ಟು ಏಳು ಪದಕಗಳನ್ನು ಜಯಿಸುವ ಮೂಲಕ ಅದ್ಭುತ ಸಾಧನೆ ತೋರಿದ್ದಾರೆ. ಈಕೆಯ ಈ ಅಮೋಘ ಸಾಧನೆಯನ್ನು ಪರಿಗಣಿಸಿ, ಚೆನ್ನೈನಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜು ಸ್ಪರ್ಧೆಗೆ ವಿಟಿಯು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಅಜಿಂಕ್ಯಾ ಸುಣಗಾರ ಹಾಗೂ ಸ್ವಯಂ ಕಾರೇಕರ್ ಕೂಡ ಪದಕಗಳನ್ನು ಗೆದ್ದು ಸಂಸ್ಥೆಗೆ ಕೀರ್ತಿ ತಂದಿದ್ದು, ಕಾಲೇಜಿನ ಪ್ರಾಚಾರ್ಣರು ಹಾಗೂ ದೈಹಿಕ ಶಿಕ್ಷಕರು ಅಭಿನಂದಿಸಿದ್ದಾರೆ.

Tags:

error: Content is protected !!