DEATH

ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಬಿ ಎ ಪಾಟೀಲ್ ನಿಧನ

Share

ಕಾಗವಾಡ ಶಿವಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಹಾಗೂ ಶಿಕ್ಷಣ ತಜ್ಞರು ಬಿ ಎ ಪಾಟೀಲ್ ಬುಧವಾರ ರಾತ್ರಿ ವಯೋ ಸಹಜದಿಂದ ನಿಧನರಾದರು.

ಮೃತರು ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ,
ಕೊಲ್ಲಾಪುರ್ ಕನ್ನೆರಿ ಮಠ ಸ್ವಾಮೀಜಿ, ಕಾಗವಾಡ ಗುರುದೇವ ಶ್ರಮದ ಯತೇಶ್ವರನಂದ ಸ್ವಾಮೀಜಿ ಇವರೊಂದಿಗೆ ಒಳ್ಳೆಯ ಒಡನಾಟ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾಗಿಯಾಗಿದ್ಧರು.

ಮೃತರು ಕಾಗವಾಡದ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಗ್ರಾಮದ ಮಲ್ಲಿಕಾರ್ಜುನ್ ಬ್ಯಾಂಕ್, ಸೇರಿ ಅನೇಕ ಸಂಘ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ವಿಶೇಷ ಶ್ರಮಿಸಿದರು.
ಮೃತರು ಪತ್ನಿ,ಇಬ್ಬರೂ ಪುತ್ರರು, ಸೊಸೆಯಂದಿರು, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!