Dharwad

ಧಾರವಾಡದಲ್ಲಿ ಬಸ್ಸನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಸ್ ಚಾಲಕ ಕಂ ಕಂಡಕ್ಟರ್‌ಗೆ ಹೃದಯಾಘಾತದಿಂದದ ಸಾವು….

Share

ಬಸ್ ನಿಲ್ದಾಣದಲ್ಲಿ ಬಸನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸರ್ಕಾರಿ ಸಾರಿಗೆ ಬಸ್ಸ ಕಂ ಕಂಡೆಕ್ಟರಗೆ ಹೃದಯಾಘಾತವಾಗಿ ಸಾವನಪ್ಪಿರುವ ದಾರುಣ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಚಾಲಕನ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಾಳೇಶ್ ತೇಲಿ, (38) ಚಾಲಕ ಮೃತ. ಕಲಘಟಗಿ ಡಿಪೊದಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಬಸನ್ನು ಬಸ್ ನಿಲ್ದಾಣಕ್ಕೆ ತಂದ ವೇಳೆ ಬಸನಲ್ಲಿ ಚಾಲಕ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು, ಸ್ಥಳದಲ್ಲಿಯೇ ಬಾಳೇಶ ಕೊನೆಯುಸಿರೆಳೆದಿದ್ದಾರೆ. ಚಾಲಕ ಬಾಳೇಶ್‌ನ ತಂದೆ ಮಗನ ನೆನೆದು ಕಣ್ಣೀರು ಇಡುತ್ತಿರುವ ತಂದೆ ತಾಯಿ,ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Tags:

error: Content is protected !!