ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಂಬಂಧಿ ಆಪ್ತರ ಮೇಲೆ ಐಟಿ ರೇಡ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಇದೂ ರಾಜಕೀಯ ಪ್ರೇರಿತ ಐಟಿ ದಾಳಿಯಾಗಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದವರು ಸತೀಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರೇ ರಾಜಕೀಯ ಪ್ರೇರಿತ ಅಲ್ಲ ಅಂತ ಹೇಳಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಧಾರವಾಡದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ ಜಾರಕಿಹೊಳಿ ಮೇಲೆ ಐಟಿ ರೇಡ್ ವಿಚಾರಕ್ಕೆ ಅವರ ಸಹೋದ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರೆಯೆ ನೀಡಿ ರಾಜಕೀಯ ಪ್ರೇರೊತ ಅಲ್ಪ ಎಂದಿದ್ದಾರೆ. ಸತೀಶ್ ಭಾವ ಮಂಜುನಾಥ್ ಮನೆಯಲ್ಲಿ ದಾಳಿ ವೇಳೆ ಕೆಲವು ದಾಖಲೆ ಸಿಕ್ಕದವು, ದಾಖಲೆ ಸಿಕ್ಕಿರುವ ಆಧಾರದ ಮೇಲೆ ಸತೀಶ್ ಜಾರಕಿಹೊಳಿ ಮೇಲೆ ದಾಳಿ ಆಗಿದೆ. ಇಡೀ ದಾಳಿ ವೇಳೆ ಹಣವೂ ಸಿಕ್ಕಿದೆ ಅಂದರೇ ಇಡಿ ದಾಳಿ ಸರಿಯಿದೆ. ಅದರ ಜೊತೆ ಬೇರೆ ಬೇರೆ ದಾಖಲೆ ಸಿಕ್ಕಿವೆ ಅದರ ಬಗ್ಗೆಯೂ ತನಿಖೆ ಆಗುತ್ತೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಮಾಡೋರು ಯಾರು..?, ಕಾಂಗ್ರೆಸ್ ನವರೇ ಭ್ರಷ್ಟಾಚಾರ ಮಾಡೋರು ಅವರ ಮೇಲೆ ದಾಳಿ ಅಗ್ತಾವೆ. ಸರ್ಕಾರ, ಸಾರ್ವಜನಿಕರ ದುಡ್ಡು ಹೊಡೆದವರ ಮೇಲೆ ದಾಳಿ ಆಗುತ್ತದೆ ಎಂದರು, ಇನ್ನೂ ಇದೇವೇಳೆ ಬಿಜೆಪಿ ಪಾದಯಾತ್ರೆಗೆ ಯತ್ನಾಳ್ ಟೀಕೆ ವಿಚಾರ ಪ್ರತಿಕ್ರೆಯೆಸಿ, ನೀವು ಯತ್ನಾಳ್ ಅವರಿಗೆ ಕೇಳಬೇಕು. ಯತ್ನಾಳ್ ಅವರು ನಮ್ಮ ಪಕ್ಷದಲ್ಲಿ ಇಲ್ಲ. ಹೀಗಾಗಿ ಅವರು ಸಂಪೂರ್ಣವಾಗಿ ಸ್ವತಂತ್ರ ಇದ್ದಾರೆ. ನಾವು ಅವರಿಗೆ ಪ್ರಶ್ನೆ ಮಾಡೋಕೆ ಬರೊಲ್ಲ. ನೀವೇ ಅವರಿಗೆ ಕೇಳಬೇಕೆಂದ ಎಂದು ಹೇಳಿದರು.
