Dharwad

ಗೋವಾ TO ಧಾರವಾಡಕ್ಕೆ ಅಕ್ರಮ ಸಾರಾಯಿ ಸಾಗಾಟ… ಲಕ್ಷಾಂತರ ರೂ. ಬೆಲೆಯ ಮದ್ಯ ರೇಡ್.

Share

ಗೋವಾದಿಂದ ಅಕ್ರಮವಾಗಿ ಲಕ್ಷಾಂತರ ರೂ. ಗೋವಾ ಸಾರಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಬಾ ಮಾಲೀಕನನ್ನು ಬಂಧಿಸಿದ್ದಾರೆ.

ಧಾರವಾಡದ ಜೈಜೀನೇಂದರ ಕಾಲೊನಿ ನಿವಾಸಿ, ಧಾಬಾ ವ್ಯಾಪಾರಿ ರೇವಣಸಾ ಪರಶುರಾಮ ಕಠಾರೆ ಎಂಬಾತ ಗೋವಾದಿಂದ ದುಬಾರಿ ಬ್ರ್ಯಾಂಡ್ ಸಾರಾಯಿ ಬಾಟಲ್‌ಗಳನ್ನು ಬೆಳಗಿನ ಜಾವ ಸುಮಾರು 2.20ರ ವೇಳೆಗೆ, ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ 152.380 ಲೀಟರ್ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ, ದಾಳಿ ಮಾಡಿದ ಅಬರಕಾರಿ ಅಧಿಕಾರಿಗಳು, ಕಪ್ಪು ಬಣ್ಣದ ಹುಂಡೈ ಎಲಾಂಟ್ರಾ ಕಾರು ಹಾಗೂ ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಗೋವಾ ಮದ್ಯ, ಮೊಬೈಲ್ ಫೋನ್ ಹಾಗೂ ಎರಡು ವಾಹನಗಳು ಸೇರಿದಂತೆ ಒಟ್ಟು 17,00,615 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಅವನ ಮೇಲೆ ದೂರು ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಇನ್ನೂ ಈ ರೇಡ್‌ನಲ್ಲಿ ಅಬಕಾರಿ ಉಪ ಆಯುಕ್ತರು, ಧಾರವಾಡ ಜಿಲ್ಲೆ ಹಾಗೂ ಅಬಕಾರಿ ಉಪ ಅಧೀಕ್ಷಕರು, ಹುಬ್ಬಳ್ಳಿ ಉಪ ವಿಭಾಗ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿ ವಿಶ್ವನಾಥ ಎಸ್. ಮಾವಿನಕಟ್ಟಿ, ಅಬಕಾರಿ ಉಪ ನಿರೀಕ್ಷಕರಾದ ನಾಗನಗೌಡ ಪಾಟೀಲ, ಮಚ್ಛೇಂದ್ರ ರೋಡಕರ, ಅಶೋಕ ಸಫಾರೆ ಹಾಗೂ ಶಿವಾನಂದ ಸುಣಗಾರ ದಾಳಿ ನಡೆಸಿದ್ದಾರೆ.

Tags:

error: Content is protected !!