Vijaypura

‘ಹಿಂಬಾಗಿಲಿನ ರಾಜಕೀಯ ನನಗೆ ಒಗ್ಗಲ್ಲ’ — ಸಚಿವ ಎಂ.ಬಿ. ಪಾಟೀಲಗೆ ಶಾಸಕ ಅಪ್ಪಾಜಿ ನಾಡಗೌಡ ಟಾಂಗ್

Share

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಸಿ.ಎಸ್. ಅಪ್ಪಾಜಿ ನಾಡಗೌಡ ಹಾಗೂ ಸಚಿವ ಎಂ.ಬಿ. ಪಾಟೀಲ ನಡುವಿನ ವಾಕ್ಸಮರ ಮುಂದುವರಿದಿದೆ. ಸಚಿವ ಎಂ.ಬಿ. ಪಾಟೀಲ ಅವರ ಹೇಳಿಕೆಗೆ ಇದೀಗ ಶಾಸಕ ಅಪ್ಪಾಜಿ ನಾಡಗೌಡ ಫೇಸ್‌ಬುಕ್ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. “ನನ್ನದು ಮೊದಲಿಂದಲೂ ತೆರೆದ ಪುಸ್ತಕದಂತಹ ರಾಜಕಾರಣ. ಹಿಂಬಾಗಿಲಿನ ರಾಜಕೀಯ ನನಗೆ ಒಗ್ಗುವಂಥದ್ದಲ್ಲ. ಅಂದ ಮಾತ್ರಕ್ಕೆ ರಾಜಕೀಯ ಪಟ್ಟುಗಳು ಗೊತ್ತಿಲ್ಲ ಅಂತಲ್ಲ” ಎಂದು ನಾಡಗೌಡ ಹೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಅನ್ನದಾತರ ಹಿತದ ವಿಚಾರದಲ್ಲಿ ರಾಜಕಾರಣ ಮಾಡುವಷ್ಟು ಕೆಟ್ಟ ರಾಜಕಾರಣ ತಮಗೆ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಕ್ಷೇತ್ರದ ಅಭಿವೃದ್ಧಿ, ಜನರ ಕಲ್ಯಾಣ ಹಾಗೂ ಅನ್ನದಾತರ ಹಿತವೇ ನನ್ನ ಆದ್ಯತೆ. ಈ ವಿಚಾರಗಳಲ್ಲಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ” ಎಂಬ ಸಂದೇಶವನ್ನು ನಾಡಗೌಡ ತಮ್ಮ ಪೋಸ್ಟ್ ಮೂಲಕ ನೀಡಿದ್ದಾರೆ. ಮುದ್ದೇಬಿಹಾಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವುದು ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ವಿಚಾರದಲ್ಲಿ ಶಾಸಕ ನಾಡಗೌಡ ಧ್ವನಿ ಎತ್ತಿರುವ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ ಹಾಗೂ ನಾಡಗೌಡ ನಡುವೆ ಮಾತಿನ ಸಮರ ನಡೆದಿದೆ. ಇದೀಗ ಫೇಸ್‌ಬುಕ್ ಪೋಸ್ಟ್ ಮೂಲಕ ನಾಡಗೌಡ ನೀಡಿರುವ ತಿರುಗೇಟು ವಿಜಯಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!