ಕನ್ನಡ ಭಾಷೆ,ಸಾಹಿತ್ಯ,ಸಂಸ್ಕೃತಿ ಯನ್ನು ಉಳಿಸಲು ಹೇಗೆ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿತೊ,ಹಾಗೆ ಇಂದು ಬಂಜಾರರ, ಭಾಷೆ,ಸಾಹಿತ್ಯ ಸಂಸ್ಕೃತ, ಸಂಗೀತ,ಆಚಾರ ವಿಚಾರಗಳನ್ನು ಉಳಿಸಿ ಮಂದಿನ ಪೀಳಿಗೆಗೆ ಬೆಳೆಸುವ ದೃಷ್ಟಿಯಿಂದ ಇಂದು ಬೆಳಗಾವಿಯಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಉದ್ಘಾಟನೆ ಯಾಗುತ್ತಿರುವುದು ಸಮಾಜದ ಹೆಮ್ಮೆಯ ವಿಷಯ ವಾಗಿದೆ ಎಂದು ಅಯ್ಯೋದ್ಯ ನಗರದ ಬಿ. ಡಿ. ಜತ್ತಿ ಕಾಲೇಜಿನಲ್ಲಿ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಪುಂಡಲೀಕ ಎಸ್ ಚವ್ಹಾಣ. ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಂ. ಸಾ .ಪ .ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಪಿ. ಲಮಾಣಿ ಅವರು ಮಾತಾಡಿ ನಸಿಶಿ ಹೋಗುತ್ತಿರುವ ಭಾಷೆ, ಸಂಸ್ಕೃತಿ ಉಳಿವಿಗಾಗಿ ನಾವೆಲ್ಲರೂ ಶ್ರಮಿಸ ಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಬಂಜಾರ ಸಾ. ಪ. ರಾಜ್ಯಾಧ್ಯಕ್ಷರಾದ ಶ್ರೀ ಕಾಂತ ಆರ್ ಜಾಧವ ಅವರು ಮಾತನಾಡಿ, ಬಂಜಾರ ಜನಾಂಗದ ಮೌಖಿಕ ಸಾಹಿತ್ಯವನ್ನು, ಸಂಗೀತ ವನ್ನು, ಕಸೂತಿ ಕಲೆಯನ್ನು ಬಂಜಾರರ ದೆವಿಕ ಪೌರಾಣಿಕ ಇತಿಹಾಸವನ್ನು ದಾಖಲಿಸುವ ಕಾರ್ಯವನ್ನು ಕ. ಬಂ. ಸಾ. ಪ,ಮಾಡಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುರೇಶ ರಾಠೋಡ ನ್ಯಾಯಾಲಯಗಳ ವ್ಯವಸ್ಥಾಪಕ ಅವರು ಮಾತನಾಡಿ,ಎಲ್ಲಾರು ಮನೆಗಳಲ್ಲಿ ಬಂಜಾರಾ ಭಾಷೆ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿ ಕೊಡಬೇಕೆಂದು ಕರೆ ನೀಡಿದರು.

ಕಾರ್ಯ ಕ್ರಮದಲ್ಲಿ ಶ್ರೀ ಎಸ್ .ಕೆ. ಚವ್ಹಾಣ, ಗದಗ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ ಎಲ್ ಚವ್ಹಾಣ, ಬಂಜಾರ ಸಾಹಿತಿಗಳಾದ ಪ್ರೊಫೆಸರ್ ನಾರಾಯಣ ರಾಠೋಡ, ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಗಂಗಾಧರ ಎಸ್ ಪಮ್ಮಾರ, ಗದಗ ಜಿಲ್ಲಾ ಪರಿಷತ್ತಿನ ಕೋಶ ಅಧ್ಯಕ್ಷರಾದ ಮೋತಿಲಾಲ ಲಮಾಣಿ, ಬೆಳಗಾವಿ ಜಿಲ್ಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಆರ್ ಜಿ ನಾಯಕ, ಜಿಲ್ಲಾ ಕಾರ್ಯಧ್ಯಕ್ಷರಾದ ಡಾ. ಎಮ್ ಎಲ್ ಲಮಾಣಿ, ಜಿಲ್ಲಾ ಉಪಾಧ್ಯಕ್ಷರಾದ ಯಮನಪ್ಪ ಚ ರಾಠೋಡ ಪ್ರಧಾನ ಕಾರ್ಯದರ್ಶಿ ವಿನೋದ್ ಪಾಟೀಲ್ ಸಹ ಕಾರ್ಯದರ್ಶಿ ಗಂಗಾಧರ್ ವ್ಹಿ ಲಮಾಣಿ, ಕೋಶಾಧ್ಯಕ್ಷರಾದ ಕೃಷ್ಣಾ ಎಂ ಪಮ್ಮಾರ್, ಡಿ ಎಚ್ ರಾಠೋಡ , ವಾಸು ರಾಠೋಡ, ಎಂ ಟಿ ರಾಠೋಡ, ಗಂಗಾಧರ ಅಂಗಡಿ, ರಾಜಕುಮಾರ್ ನಾಯಕ, ಶ್ರೀಮತಿ ಕಲ್ಪನಾ ಲಮಾಣಿ, ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪುಂಡಲೀಕ ಪಮ್ಮಾರ, ಶ್ರೀಮತಿ ಹೇಮಾ ಲಮಾಣಿ, ಶ್ರೀಮತಿ ಶಕುಂತಲಾ ಲಮಾಣಿ, ಶ್ರೀಮತಿ ಪ್ರೇಮಾ ರಾಠೋಡ, ಲಕ್ಷ್ಮಣ, ಆರ್ ಲಮಾಣಿ , ಅರ್ಜುನ್ ರಾಠೋಡ, ದೇವೇಂದ್ರ ನಾಯಕ, ಥಾವರಪ್ಪ ರಾಠೋಡ, ಪುಂಡಲೀಕ ಚವ್ಹಾಣ, ಹನುಮಂತ ರಾಠೋಡ, ಭೀಮಶಿ ಎಲ್ ರಾಠೋಡ, ಬಂಜಾರಾ ಮಹಿಳಾ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಶ್ರೀಮತಿ ರಾಜಲಕ್ಷ್ಮಿ ಪಮ್ಮಾರ ಕಲಾತಂಡ ಮುಧೋಳ್ ಅವರಿಂದ ಬಂಜಾರ ಸಾಂಪ್ರದಾಯಿಕ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ಡಾ. ಎಮ್ ಎಲ್ ಲಮಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ನಾರಾಯಣ ರಾಠೋಡ ಅವರು ಪದಾಧಿಕಾರಿಗಳುಗೆ ಪ್ರಮಾಣ ವಚನ ಭೋದಿಸಿದರು, ಶ್ರೀಮತಿ ಪ್ರೇಮಾ ಅವರು ಪ್ರಾರ್ಥನೆ ಹಾಡಿದರೆ, ಗಂಗಾಧರ್ ವ್ಹಿ ಲಮಾಣಿ ಅವರು, ಸರ್ವರನ್ನು ಸ್ವಾಗತಿಸಿದರು, ಶ್ರೀಮತಿ , ಕಲ್ಪನಾ ಲಮಾಣಿ ಹಾಗೂ ಶಕುಂತಲಾ ಲಮಾಣಿ ಅವರು ನಿರೂಪಿಸಿದರು.
