ತಮ್ಮ ಶಾಸಕರ ನಿಧಿಯಿಂದ ಬರಗಾಂವ್ ಗ್ರಾಮದ ಸಮುದಾಯ ಭವನಕ್ಕಾಗಿ ಮಂಜೂರಾದ 10 ಲಕ್ಷ ರೂಪಾಯಿಗಳ ನಿಧಿಯ ಕಾಮಗಾರಿಯ ಭೂಮಿಪೂಜೆಯ ಅತ್ಯಂತ ಉತ್ಸಾಹದಿಂದ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ನೆರವೇರಿತು


ತದನಂತರದಲ್ಲಿ ಮಾತನಾಡಿದ ಅವರು ಗ್ರಾಮಸ್ಥರ ಬೇಡಿಕೆಯಂತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯಂತು ಪ್ರಮುಖವಾದ ಯೋಜನೆಯಾಗಿದ್ದು, ಇದರಿಂದ ಬರಗಾಂವ್ ವಲಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಸ್ವಂತ ಮತ್ತು ಉತ್ತಮ ಕಟ್ಟಡ ಲಾಭವಾಗಲಿದೆ ಎಂದರು
ಈ ಸಂದರ್ಭದಲ್ಲಿ ಗ್ರಾಮದ ಯುವಕರು,ಹಿರಿಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
