Belagavi

ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ

Share

ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು. ಸಮಾಜದ ಕೊಂಡಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗೌರವಿಸುವ ಕಾರ್ಯ ಎಲ್ಲರಿಂದಾಗಬೇಕು ಶಿಕ್ಷಕರ ಬೇಕು ಬೇಡಿಕೆಗಳನ್ನು ಬದಿಗಿಡದೇ ಸರ್ಕಾರ ಸೇರಿದಂತೆ ಎಲ್ಲರೂ ಸ್ಪಂದಿಸುವಂತಾಗಬೇಕು.ಶಿಕ್ಷಕ ನಿಜವಾಗಿಯೂ ಸಮಾಜ ಮತ್ತು ದೇಶದ ನಿರ್ಮಾತೃ.ಒಬ್ಬ ಆದರ್ಶ ಶಿಕ್ಷಕರನ್ನು ನಿರ್ಮಿಸಿದವರು ಒಬ್ಬ ಶಿಕ್ಷಕರೇ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ ಹೇಳಿದರು.

ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ,ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನಗರ ವಲಯ ಬೆಳಗಾವಿ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಗಣನೀಯವಾದದ್ದು. ಸಮಾಜದ ಕೊಂಡಿಯಂತೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಗೌರವಿಸುವ ಕಾರ್ಯ ಎಲ್ಲರಿಂದಾಗಬೇಕು ಶಿಕ್ಷಕರ ಬೇಕು ಬೇಡಿಕೆಗಳನ್ನು ಬದಿಗಿಡದೇ ಸರ್ಕಾರ ಸೇರಿದಂತೆ ಎಲ್ಲರೂ ಸ್ಪಂದಿಸುವಂತಾಗಬೇಕು.ಶಿಕ್ಷಕ ನಿಜವಾಗಿಯೂ ಸಮಾಜ ಮತ್ತು ದೇಶದ ನಿರ್ಮಾತೃ.ಒಬ್ಬ ಆದರ್ಶ ಶಿಕ್ಷಕರನ್ನು ನಿರ್ಮಿಸಿದವರು ಒಬ್ಬ ಶಿಕ್ಷಕರೇ ಎಂದರು.


ಅತಿಥಿಗಳಾಗಿ ಆಗಮಿಸಿದ್ದ ಪ್ರಾದೇಶಿಕ ಆಯುಕ್ತೆ ಗಾಯತ್ರಿ ಕೆ ಎಂ ಮಾತನಾಡಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಶಿಕ್ಷಣ ಬಹು ಮುಖ್ಯವಾದದ್ದು ಆ ನಿಟ್ಟಿನಲ್ಲಿ ಎಲ್ಲರೂ ಸಹ ಶಿಕ್ಷಣಕ್ಕೆ ವಿಶೇಷವಾಗಿ ಶಿಕ್ಷಕರಿಗೆ ಮಹತ್ವ ಕೊಡಬೇಕಿದೆ ಹಾಗೆ ಶಿಕ್ಷಕರು ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯ ನಿರ್ಮಿಸಬೇಕಾಗಿದೆ. ಎಂದರು .

ಉಪ್ಪಾರ್ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಭರಮಣ್ಣ ಉಪ್ಪಾರ ಶಿಕ್ಷಕರ ಮಹತ್ವ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ 2026 ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಹಾಗೂ ಕ್ರೀಡಾಕೂಟಗಳನ್ನು ವಿವಿಧ ಶಾಲೆಗಳ ಮಕ್ಕಳಿಂದ ಛದ್ಮವೇಷ, ಕರಾಟೆ, ಬಾಕ್ಸಿಂಗ್ ಮತ್ತು ಭಾರ ಎತ್ತುವಿಕೆ ಸ್ಪರ್ಧೆಗಳನ್ನು ಸಾಂಕೇತಿಕವಾಗಿ ಪ್ರದರ್ಶನ ಮಾಡುವ ಮೂಲಕಉದ್ಘಾಟಿಸಲಾಯಿತು.ಇದೇ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ 39 ಮತ್ತು ಪ್ರೌಢಶಾಲಾ ವಿಭಾಗದ 19 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧನೆ ಮಾಡಿದ ಪ್ರಾಥಮಿಕ ಶಾಲೆಯ 29 ಮತ್ತು ಪ್ರೌಢಶಾಲೆಯ 21 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾಗೆಯೇ 2026 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರರ ಫಲಿತಾಂಶ ಸಾಧನೆ ಮಾಡಿದ 20ಕ್ಕೂ ಹೆಚ್ಚು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಂಗ್ಲಿ ಸಾಬ ನಾಯಿಕ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ರಾಜ್ಯ ಉಪ್ಪಾರ ನಿಗಮ ಮಂಡಳಿ ಅಧ್ಯಕ್ಷ ಭರಮಣ್ಣ ಉಪ್ಪಾರ, ಎಸ್ ಎಸ್ ಹಿರೇಮಠ, ಬಸವರಾಜ ಮಿಲ್ಲಾನಟ್ಟಿ,ಮಂಗಲಾ ಕೊರಬು,ಲಕ್ಷ್ಮಣ ಯಕ್ಕುಂಡಿ,ಪಿ. ಆರ್. ಪಾಟೀಲ, ಎನ್. ಆರ್. ಪಾಟೀಲ, ಐ. ಡಿ. ಹಿರೇಮಠ ಜುನೆದಿ ಪಟೇಲ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ರಮೇಶ ಗೋಣಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಗಜಾನನ ಸೊಗಲನ್ನವರ, ಬಾಬು ಸೊಗಲನ್ನವರ, ಅಶೋಕ ಖೋತ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರು ಸದಸ್ಯರು ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಡಿ ಡಿ ಎಸ್ ಈ ಲೀಲಾವತಿ ಹಿರೇಮಠ ಸ್ವಾಗತಿಸಿ ಕಳೆದ ವರ್ಷಗಳಲ್ಲಿ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಆದ ಶೈಕ್ಷಣಿಕ ಬದಲಾವಣೆಗಳು ಮತ್ತು ಸಾಧನೆಗಳ ಬಗ್ಗೆ ಪಕ್ಷಿನೋಟ ನೀಡಿದರು. ಅಂಜನಾ ಮುರಗೋಡ, ಹೇಮಾ ಅಂಗಡಿ, ಮತ್ತು ರಾಜು ದೇಶನೂರ.ನಿರೂಪಿಸಿದರು. ನಗರ ವಲಯದ ಬಿ ಇ ಓ ರವಿ ಭಜಂತ್ರಿ ವಂದಿಸಿದರು.

Tags:

error: Content is protected !!