ಮುಂಗಾರು ಕೈಕೊಟ್ಟು ಹಿನ್ನಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದದ್ದಕ್ಕೆ ರಾಜ್ಯ ಸರ್ಕಾರ ಮೊದಲ ಪಟ್ಟಿಯಲ್ಲಿ 101 ತಾಲ್ಲೂಕುಗಳನ್ನು ಬರಗಾಲಪಿಡೀತ ತಾಲೂಕು ಎಂದು ಘೋಷಣೆ ಮಾಡಿದ್ದು, ಆದರೆ ಈ ಪಟ್ಟಿಯಲ್ಲಿ ಧಾರವಾಡದ ಯಾವುದೇ ತಾಲೂಕು ಘೋಷಣೆ ಮಾಡಿರಲಿಲ್ಲ. ಈ ವಿಚಾರಕ್ಕೆ ಧಾರವಾಡದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದಂತೆ ಈಗ ಕೊನೆಗೂ ರಾಜ್ಯ ಸರ್ಕಾರ ಧಾರವಾಡದ 5ತಾಲ್ಲುಕುಗಳನ್ನು ಎರಡನೇ ಪಟ್ಟೊಯಲ್ಲಿ ಬರಗಾಲಪೀಡಿತ ತಾಲ್ಲೂಕುಗಳನ್ನಾಗಿ ಘೋಷಣೆ ಮಾಡಿದೆ.

ಮೊದಲ ಬರಗಾಲಪೀಡಿತ ಲೀಸ್ಟನಲ್ಲಿ ಧಾರವಾಡದ ಯಾವುದೇ ತಾಲ್ಲೂಕುಗಳು ಹೆಸರು ಬಂದಿರಲಿಲ್ಲ. 101 ತಾಲ್ಲೂಕುಗಳು ಮೊದಲಪಟ್ಟಿಯಲ್ಲಿ ಸ್ಥಾನ ಪಡೆದಿದ್ದರಿಂದ ಹಾಗೂ ಧಾರವಾಡ ಯಾವುದೇ ತಾಲ್ಲೂಕು ಸೇರ್ಪಡೆಯಾಗದರ ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಗಳು ಹಾಗೂ ರೈತರು ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಕನ್ನಡ ಪರ ಸಂಘಟನೆಗಳು ಸೇರಿ ರೈತ ಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದವು. ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಎ ರಾಜ್ಯ ಸರ್ಕಾರ ಈಗ ಎರಡನೆರ ಬರಗಾಲಪಿಡೀತ ಲೊಇಸ್ಟ ಕಳೆದ ದಿನ ಬಿಡುಗಡೆ ಮಾಡಿದ್ದು, ಧಾರವಾಡ ಜಿಲ್ಲೆ ಧಾರವಾಡ ತಾಲ್ಲೂಕು, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲ್ಲೂಕುಗಳು ಈಗ ಬರಪಿಡೀತ ಪಟ್ಡೆಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದೂ ರೈತರಲ್ಲಿ ಕೊಂಚ ನಿರಾಳತೆಯನ್ನು ಮೂಡುವಂತೆ ಮಾಡಿದೆ.
