ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕಮ್ ಅವರು ಅಧಿಕಾರಗ್ರಹಣ ಮಾಡಿದ್ದಾರೆ.


ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕಮ್ ಅವರು ಅಧಿಕಾರಗ್ರಹಣ ಮಾಡಿದ್ದಾರೆ. ಬೆಳಗಾವಿಯ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕಮ್ ಅವರು ಇಂದು ಅಧಿಕಾರಗ್ರಹಣ ಮಾಡಿದರು. ಕಾರ್ಯಾಲಯಕ್ಕೆ ಆಗಮಿಸಿದ ನೂತನ ಆಯುಕ್ತರಿಗೆ ಗೌರವ ರಕ್ಷೆ ನೀಡಿ ಬರ ಮಾಡಿಕೊಳ್ಳಲಾಯಿತು.
ನಂತರ ಬೆಳಗಾವಿ ಮಹಾನಗರದ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕಮ್ ಅವರು ಅಧಿಕೃತವಾಗಿ ಅಧಿಕಾರಗ್ರಹಣ ಮಾಡಿದರು. ನಿರ್ಗಮಿತ ಆಯುಕ್ತರಾದ ಭೂಷಣ್ ಬೋರಸೆ ಅವರು ಅಧಿಕಾರದಂಡವನ್ನು ಹಸ್ತಾಂತರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಆಯುಕ್ತರಾದ ಪ್ರಕಾಶ್ ನಿಕಮ್ ಅವರು ಈಗಾಗಲೇ ನಿರ್ಗಮಿತ ಭೂಷಣ್ ಬೋರಸೆ ಅವರು ಹಲವಾರು ಬದಲಾವಣೆಗಳನ್ನು ಬೆಳಗಾವಿಗೆ ತಂದಿದ್ದು, ಅದೇ ಆಧಾರದ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುವುದು. ರೌಡಿಸಂನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸಲಾಗುವುದು. ಮೊದಲೂ ಬೆಳಗಾವಿಯಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಬೆಳಗಾವಿಗಣೇಶೋತ್ಸವ ಸೇರಿದಂತೆ ಬೆಳಗಾವಿಯ ಹಬ್ಬ ಉತ್ಸವಗಳನ್ನು ಶಾಂತಿಪೂರ್ಣವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಈ ವೇಳೆ ನಿರ್ಗಮಿತ ಪೊಲೀಸ್ ಕಮಿಷ್ನರ್ ಭೂಷಣ್ ಬೋರಸೆ, ಎಸ್ಪಿ ಕೆ. ರಾಮರಾಜನ್ ಸೇರಿದಂತೆ ಇನ್ನುಳಿದವ ಅಧಿಕಾರಿಗಳು ಉಪಸ್ಥಿತರಿದ್ಧರು.
