Belagavi

ಕಣಬರಗಿಯಲ್ಲಿ ಅರ್ಥಪೂರ್ಣವಾಗಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಣೆ: ಕಟೌಟ್ ಸಂಸ್ಕೃತಿಗೆ ತಿಲಾಂಜಲಿ ನೀಡಿ ಹಸಿವು ನೀಗಿಸಿದ ಅಭಿಮಾನಿಗಳು

Share

ನಟರ ಹುಟ್ಟುಹಬ್ಬ ಬಂತೆಂದರೆ ಸಾಕು ಅಭಿಮಾನಿಗಳು ಹಾಲಿನ ಅಭಿಷೇಕ್, ಬ್ಯಾನರ್, ಪಟಾಕಿ ಎಂದು ಹಣವನ್ನು ನೀರಿನಂತೆ ಖರ್ಚು ಮಾಡುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ, ಬೆಳಗಾವಿಯ ಕಣಬರಗಿ ಅಭಿಮಾನಿಗಳು ಇವೆಲ್ಲಕ್ಕೂ ಭಿನ್ನವಾಗಿ, ಅನಾಥ ಮತ್ತು ಕಿವುಡ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿ ಹಸಿವು ನೀಗಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಬೆಳಗಾವಿಯ ವಿಷ್ಣು ಸೇನಾ ಸುದೀಪ್ ಸಾಮ್ರಾಜ್ಯ ಅಭಿಮಾನಿ ಬಳಗ ಕಣಬರಗಿ ವತಿಯಿಂದ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸುದೀಪ ರವರ ಹುಟ್ಟುಹಬ್ಬದ ಅಂಗವಾಗಿ ಬೆಳಗಾವಿ ಕಣಬರಗಿ ಆಟೋನಗರ ನಲ್ಲಿ ಇರುವ ಅಜಯ ಕಿವುಡ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆ ಯಲ್ಲಿ ಸುದೀಪ್ ರವರ ಅಭಿಮಾನದ ಕೇಕ್ ನ್ನು ಕತ್ತರಿಸಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿ ಮಕ್ಕಳಿಗೆ ಒಳ್ಳೆಯ ಊಟದ ವ್ಯವಸ್ಥೆ ಮಾಡಿ ರಾಜ್ಯದ ಜನತೆ ಹಾಗೂ ಸಿನಿಮೀಯ ಪ್ರೇಕ್ಷಕರಿಗೆ ಹಾಗೂ ವಿವಿಧ ನಟರ ಅಭಿಮಾನಿಗಳಿಗೆ ಪ್ರೇರರಣೆಯಾಗಿದ್ದರೆ ಈ ಕಾರ್ಯಕ್ರಮ ಮಾಡುವ ಉದ್ದೇಶ ಬಡತನ ದಲ್ಲಿ ಇರುವ ಮಕ್ಕಳ ಹಸಿವನ್ನು ನೀಗಿಸುವ ಚಿಕ್ಕ ಪ್ರಯತ್ನ ಮತ್ತು ಮಾದರಿಯ ದಾರಿದೀಪವಾಗಿದ್ದಾರೆ ಹಾಗೂ ನಮ್ಮ ರಾಜ್ಯದಲ್ಲಿ ಬಡತನ ನಿರ್ಮೂಲನಕ್ಕೆ ಇದೊಂದು ಚಿಕ್ಕ ಉದಾಹರಣೆಯಾಗಿ ಎಲ್ಲರಿಗೂ ಮಾದರಿಯಾಗಿ ಬಡತನ ಹಾಗೂ ಹಸಿವು ನೀಗಿಸುವ ಪ್ರಯತ್ನ ಎಲ್ಲರಿಂದ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆ . ಹುಟ್ಟುಹಬ್ಬದಂದು ಹಾರ ಹಾಗೂ ಕಟೌಟ್ ಗೆ ಹಾಲು ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಹಣವನ್ನು ವ್ಯರ್ಥ ಮಾಡಬಾರದು ಎನ್ನುವುದು ಕಿಚ್ಚ ಸುದೀಪ್ ಕಣಬರಗಿ ನಗರದ ಅಭಿಮಾನಿಗಳ ಮುಖ್ಯ ಉದ್ದೇಶವಾಗಿದೆ ಎಂದು ಮಹೇಶ್ ಶೀಗಿಹಳ್ಳಿ ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಬದಲ್ಲಿ ಅಭಿಮಾನಿಗಳಾದ ರಾಜು ಹಿತ್ತಲಮನಿ , ಕೈಜರ್ ರಾಮ್ , ಪರಶುರಾಮ ಪೂಜಾರಿ , ಸುನೀಲ ನಾಯಕ ,ಭರತ ಹಿತ್ತಲಮನಿ , ಅಪ್ಪಯ್ಯ ಬಂಡಿಹೊಳಿ , ಅಭಿ ನಾಯಕ್ , ಗೌತಮ ವೀರಗೌಡರ , ಪರಶುರಾಮ ಬಂಡಿಹೊಳಿ , ಅನ್ನು ತಳವಾರ , ಶಿವು ಗಂಡಗುದ್ರಿ , ಸುನಿಲ್ ಮೀಶಿ , ನಾಗರಾಜ್ ಬುದನೂರ , ಭೀಮು ಕಿಚ್ಚಾ , ವಿಶಾಲ್ ಬಂಡಿಹೊಳೆ , ಆಕಾಶ್ ಹೊಸಹೊಳ್ಳಿ , ಅಭಿಷೇಕ್ ಮಣ್ಣೂರ , ನಾಗೇಶ್ ಜಡಗಿ .ಪ್ರವೀಣ್ ಮುಸಲಾಮರಿ , ಅಮಿತ್ ಭಂಗ್ಯಾಗೋಳ .ಕಿಟ್ಟು ಜಡಗಿ . ಪ್ರಕಾಶ್ ಕೊಲೆನ್ನವರ್ ಉಪಸ್ಥಿತರಿದ್ದರು

Tags:

error: Content is protected !!