hubbali

ಸಾರಿಗೆ ಬಸ್’ಗಳಲ್ಲಿ ಜನರ ಸುರಕ್ಷತೆ ಪ್ರಶ್ನಿಸಿದ ಕೆ.ಆರ್.ಎಸ್ ! ಆರ್.ಟಿ.ಓ ಕ್ರಮ ಏನು ?

Share

ಸಾರಿಗೆ ಬಸ್’ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಚಾಲಕ, ನಿರ್ವಾಹಕ ಸೇರಿದಂತೆ ಸಂಬಂಧಪಟ್ಟ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ.ಆರ್.ಎಸ್ ಪಕ್ಷ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ ಮನವಿ ಕೊಟ್ಟಿದೆ.

ಹೌದು ! ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ಭಾಗದ ಸಾರಿಗೆ ಬಸ್’ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ಜೀವದ ಸುರಕ್ಷತೆ ಮರೆತು ಬಾಗಿಲಿಗೆ ಜೋತು ಬಿದ್ದು ಪ್ರಯಾಣ ಬೆಳೆಸುತ್ತಾರೆ.

ಸಾರಿಗೆ ಬಸ್ ಕಿಟಿಕಿ ಮತ್ತು ಬಾಗಿಲುಗಳನ್ನು ದುರಸ್ತಿ ಪಡಿಸಿ ಪ್ರಯಾಣದ ವೇಳೆ ಕಡ್ಡಾಯವಾಗಿ ಬಾಗಿಲು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿ ಇನ್ಸಪೇಕ್ಟರ್ ಎಸ್.ಡಿ.ಬೆಲ್ಲದ ಸಹಾಯಕ ಸಂಚಾರ ವ್ಯವಸ್ಥಾಪಕರಾದ ಮಂಜುನಾಥ ಸಾಲಿಮಠ ಅವರಿಗೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಪತ್ರದ ಮೂಲಕ ಸಮಸ್ಯೆ ವಿವರಿಸಿದ್ದಾರೆ.

ಒಟ್ಟಾರೆ ಸಾರಿಗೆ ಬಸ್’ಗಳಲ್ಲಿ ಸುರಕ್ಷತೆ ಮತ್ತು ನಿಗದಿತ ಮಿತಿಯಲ್ಲಿ ಪ್ರಯಾಣಿಕರನ್ನು ಸಾಗಿಸುವ ಕೆ.ಆರ್.ಎಸ್ ಪಕ್ಷದ ಒತ್ತಾಯಕ್ಕೆ ಸಾರಿಗೆ ಸಂಸ್ಥೆ ಮಾತ್ರವಲ್ಲದೆ ಪ್ರಯಾಣಿಕರು ಸಹ ಒಮ್ಮತ ನೀಡಬೇಕಾಗಿದೆ.

ಒಟ್ಟಾರೆ ಕೆ.ಆರ್.ಎಸ್‌ ಪಕ್ಷದ ಮನವಿಗೆ ಎಷ್ಟರ ಮಟ್ಟಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಸ್ಪಂದಿಸಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿದೆ.

Tags:

error: Content is protected !!