Vijaypura

ATM ಮಷಿನ್‌ಗೇ ಕನ್ನ! ಹಣ ದೋಚಿ ಕಳ್ಳರು ಪರಾರಿ ಲಕ್ಷಾಂತರ ನಗದು ಇರುವ ಶಂಕೆ; ತಡರಾತ್ರಿ ಕಳ್ಳರ ಕೈಚಳಕ!

Share

ವಿಜಯಪುರ ಜಿಲ್ಲೆಯಲ್ಲಿ ATM ಕಳ್ಳರು ಕೈಚಳಕ ತೋರಿದ್ದಾರೆ. ತಡರಾತ್ರಿ ಬಂದ ಮುಸುಕುಧಾರಿ ಕಳ್ಳರು ATM ಮಷಿನ್‌ನಲ್ಲಿ ಕಳ್ಳತನ ಮಾಡಿ ಹಣ ಹೊತ್ತೊಯ್ದಿದ್ದಾರೆ.

ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ATMನಲ್ಲಿ ಲಕ್ಷಾಂತರ ರೂಪಾಯಿ ನಗದು ಇತ್ತು ಎನ್ನಲಾಗುತ್ತಿದೆ. ಕಳ್ಳತನದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ATM ಕೇಂದ್ರಕ್ಕೆ ತಡರಾತ್ರಿ ಮುಸುಕುಧಾರಿಗಳ ತಂಡ ಎಂಟ್ರಿ ಕೊಟ್ಟಿದೆ. ಯಾರ ಕಣ್ಣಿಗೂ ಬೀಳದಂತೆ ಕೃತ್ಯ ಎಸಗಿದ ಕಳ್ಳರು, ATM ಮಷಿನ್‌ನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ATMನಲ್ಲಿ ಲಕ್ಷಾಂತರ ರೂಪಾಯಿ ನಗದು ಇದ್ದಿರಬಹುದು ಎಂದು ಶಂಕಿಸಲಾಗಿದ್ದು, ಎಷ್ಟು ಹಣವಿತ್ತು ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಕಳ್ಳರ ಕೃತ್ಯ ATM ಕೇಂದ್ರದಲ್ಲಿನ CCTV ಕ್ಯಾಮೆರಾಗಳಲ್ಲಿ ಸೆರೆ ಯಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಜಾಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ. ಕಳ್ಳರು ಯಾರು? ಎಷ್ಟು ಮಂದಿ ಇದ್ದರು?
ಯಾವ ವಾಹನದಲ್ಲಿ ಬಂದಿದ್ದರು?
ಕದ್ದ ATM ಮಷಿನ್ ಹಣ ಎಲ್ಲಿಗೆ ಸಾಗಿಸಿದ್ದಾರೆ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Tags:

error: Content is protected !!