Dharwad

ಮಹಾರಾಷ್ಟ್ರದಿಂದ ಧಾರವಾಡಗೆ ಬಂದ ರೈಲ್ವೇಯ ಸೀಟ್ ಕೆಳಗೆ ಅರೇ ಬರೇ ಬಟ್ಟೆಯಲ್ಲಿ ಯುವತಿ ಶವ ಪತ್ತೆ… ಡೆಡ್ ಬಾಡಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು.

Share

ಮಹರಾಷ್ಟ್ರದಿಂದ ಇಂದು ಬೆಳ್ಳಗೆ ಧಾರವಾಡಕ್ಕೆ ಬಂದಿದ್ದ ಪ್ಯಾಸೇಂಜರ್ ಟ್ರೈನ್ ‌ನಲ್ಲಿ ಸೀಟ್ ಕೆಳಗಡೆ ಯುವತಿಯೊಬ್ಬಳ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಹಾಗೂ ಅರೇ ಬರೇ ಬಟ್ಟೆಯಲ್ಲಿ ಪತ್ತೆಯಾಗಿರುವ ಘಟನೆ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಕಿಗೆ ಬಂದಿದ್ದು, ಶವ ನೋಡಿದ ರೈಲ್ವೆ ಇಲಾಖೆಯ ಅಧಿಕಾರಿಗಳು ಬೆಚ್ಚಿಬಿದಿದ್ದಾರೆ.

ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರೈಲಿನ ಬೋಗಿಯಲ್ಲೇ ಯುವತಿಯ ಮೃತದೇಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಘಟನೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ. ಮೃತ ಯುವತಿ ಯಾರು, ಯಾವ ಊರಿನವರು ಹಾಗೂ ಯಾವ ಸಂದರ್ಭಗಳಲ್ಲಿ ಈ ದುರ್ಘಟನೆ ನಡೆದಿದೆ ಎಂಬ ಕುರಿತು ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಯುವತಿಯ ಮೈಮೇಲಿನ ಬಟ್ಟೆಗಳು ವಿರೂಪಗೊಂಡ ಸ್ಥಿತಿಯಲ್ಲಿದ್ದು, ಮುಖದ ಮೇಲೆಯೂ ಗಾಯದ ಹಾಗೂ ವಿಕೃತ ರೀತಿಯ ಕುರುಹುಗಳು ಕಂಡುಬಂದಿವೆ. ಮೃತದೇಹದ ಸ್ಥಿತಿಯನ್ನು ಗಮನಿಸಿದಾಗ ಪ್ರಕರಣದ ಹಿಂದಿನ ನಿಜಾಂಶದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ವಿಷಯ ತಿಳಿಯುತ್ತಿದ್ದಂತೆಯೇ ರೈಲ್ವೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆ ಹಚ್ಚುವ ಜೊತೆಗೆ ಯುವತಿಯ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ಗಂಭೀರ ತನಿಖೆಗೆ ಮುಂದಾಗಿದ್ದಾರೆ.
ರೈಲಿನ ಬೋಗಿಯಲ್ಲೇ ಈ ಘಟನೆ ನಡೆದಿದೆಯೇ? ಇದು ಕೊಲೆಯೋ ಅಥವಾ ಬೇರೆ ಯಾವುದಾದರೂ ಕಾರಣದಿಂದ ಯುವತಿ ಮೃತಪಟ್ಟಿದ್ದಾರೆಯೇ? ಎಂಬ ಹಲವು ಅನುಮಾನಗಳು ಇದೀಗ ಮೂಡಿವೆ.
ಘಟನೆಯ ಹಿಂದಿನ ಸಂಪೂರ್ಣ ಸತ್ಯ ರೈಲ್ವೇ ಪೊಲೀಸರ ತನಿಖೆಯಿಂದಷ್ಟೇ ಬೆಳಿಗೆ ಬರಬೇಕಾಗಿದೆ. ಧಾರವಾಡ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

Tags:

error: Content is protected !!