ಖಾನಾಪುರ ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಆಡಳಿತದಿಂದ ಪ್ರಮುಖ ಹೆಜ್ಜೆ ಇಡಲಾಗಿದೆ. ಇದರ ಭಾಗವಾಗಿ ಚಾಪಗಾಂವ ಮತ್ತು ಲಾಲ್ವಾಡಿ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಆರಂಭಗೊಂಡಿರುವುದು ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.

ಖಾನಾಪುರ ತಾಲ್ಲೂಕಿನ ಚಾಪಗಾಂವ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಯಡೋಗಾ ಮಾರ್ The ಬಸ್ ಚಾಪಗಾಂವ, ಕಾರಲಗಾ ಮತ್ತು ಲಾಲ್ವಾಡಿ ಸಂಪರ್ಕಿಸುವ ಹೊಸ ಬಸ್ ಸೇವೆಗೆ ಸಡಗರದಿಂದ ಚಾಲನೆ ನೀಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಪಂಚ ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ನೇತೃತ್ವದಲ್ಲಿ ಬಸ್ ಗೆ ಪೂಜೆ ಸಲ್ಲಿಸಿ, ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಈ ಬಸ್ ಪ್ರತಿದಿನ ಬೆಳಗ್ಗೆ 10:30ಕ್ಕೆ ಖಾನಾಪುರ ಆಗಾರದಿಂದ ಹೊರಡಲಿದ್ದು, ಶಾಲಾ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅನುಕೂಲವಾಗಲಿದೆ.
