ಬೆಳಗಾವಿ ಗ್ರಾಮಾಂತರ ಭಾಗದಲ್ಲಿ ಗೋಸೇವೆಯ ಮತ್ತೊಂದು ಮಾನವೀಯ ಕಾರ್ಯ ಬೆಳಕಿಗೆ ಬಂದಿದೆ. ಸಾಕುವುದು ಕಷ್ಟವಾದ ಹಸುಗಳನ್ನು ಕಸಾಯಿಖಾನೆಗೆ ಕಳಿಸುವ ಬದಲು ಗೋಶಾಲೆಗೆ ತಲುಪಿಸಿ ಎಂದು ಗೋ ರಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ಗೋಜಗಾ ಗ್ರಾಮದಲ್ಲಿ ವಯಸ್ಸಾದ ಹಸುವೊಂದನ್ನು ಸ್ಥಳೀಯ ಗೋ ರಕ್ಷಾ ತಂಡವು ಸುರಕ್ಷಿತವಾಗಿ ರಕ್ಷಿಸಿ ಗೋಶಾಲೆಗೆ ಸೇರಿಸಿದೆ. ದಾಜಿಭಾ ಶುಭರಾವ್ ಯಾಳಗಿ ಅವರ ಮನೆಯಲ್ಲಿದ್ದ ಈ ಮೂಕಪ್ರಾಣಿಯ ರಕ್ಷಣೆಗೆ ನಿಲೇಶ್, ಪ್ರಕಾಶ್ ಲಡಾವಾ ಹಾಗೂ ಶಂಕರ ಹಿರೇಮಠ ಸ್ವಾಮಿ ನೇತೃತ್ವದ ತಂಡ ಮುಂದಾಗಿದ್ದು, ಜಾನುವಾರುಗಳನ್ನು ಕಸಾಯಿಖಾನೆಗೆ ನೀಡದೆ ಗೋಶಾಲೆಗೆ ಒಪ್ಪಿಸುವಂತೆ ಸಾರ್ವಜನಿಕರಿಗೆ ವಿಶೇಷ ಮನವಿ ಮಾಡಲಾಗಿದೆ.
