ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರವಾಗುತ್ತೇ ಎಂಬ ಕಾರಣಕ್ಕೆ ರಾಜೀನಾಮೆಯನ್ನು ನೀಡಿದ್ದು, ಈಗ ಈ ವಿಷಯ ಕ್ಲೋಸ್ ಆಗಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಸುಭದ್ರವಾಗಿರಲಿದೆ. ಶೀಘ್ರದಲ್ಲೇ ಮಹಿಳಾ ಸಚಿವರನ್ನು ನೇಮಿಸಲಾಗುವುದೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಅವರು ಇಂದು ಬೆಳಗಾವಿಯಲ್ಲಿ ಕರೆಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಬರಪಟ್ಟಿಗೆ ಇನ್ನು ಬೆಳಗಾವಿ ಸೇರಿಲ್ಲ. ಕೇಂದ್ರ ಸರ್ಕಾರದ ನಿಯಮಗಳಂತೆ ನಡೆಯಬೇಕಾಗುತ್ತದೆ. ಅವರ ನಿಯಮದಲ್ಲಿ ಯರಗಟ್ಟಿ ಸವದತ್ತಿ ತಾಲೂಕುಗಳು ಬರಲ್ಲ. ಮುಂದಿನವಾರದಲ್ಲಿ ಬರಬಹುದು. ಮಾರ್ಗಸೂಚಿ ಪರಿಷ್ಕರಣೆಗೆ ಮನವಿ ಮಾಡಲಾಗಿದೆ. ಕೇಂದ್ರದ ಅಧ್ಯಯನ ತಂಡ ಬಂದು ಪರಿಶೀಲಿಸಿ ವರದಿ ನೀಡಲು ತಡವಾಗುತ್ತದೆ. ನಂತರ ಅವರ ಗೃಹ ಸಚಿವರು ಕ್ರಮಕೈಗೊಳ್ಳುತ್ತಾರೆ. ಬೆಳೆ ವಿಮೆ ಕೆಲ ಜನರು ಮಾಡಿದ್ದಾರೆ. ಕೆಲವರು ಇಲ್ಲ. ಎಲ್ಲವೂ ಸರಿಯಾಗಿದೆ. ಕಳೆದ ಬಾರಿ ಕೇಂದ್ರದ ದಾರಿ ಕಾಯದೇ, ರಾಜ್ಯ ಸರ್ಕಾರದಿಂದಲೇ ಪರಿಹಾರ ವಿತರಿಸಲಾಗಿದೆ. ಎಲ್ಲವೂ ನಮ್ಮ ಲೆಕ್ಕದಲ್ಲಿ ಸರಿಯಿದ್ದು, ಆತಂಕ ಪಡುವಂತಿಲ್ಲ. ಡಿಸಿ ಅವರ ನೇತೃತ್ವದಲ್ಲಿ ನಮ್ಮ ಅಧಿಕಾರಿಗಳು ಎಲ್ಲವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಹಿಡಕಲ್ ಡ್ಯಾಂ ತುಂಬಿದ್ದು, ಈಗಾಗಲೇ 2 ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. 2ನೇ ಹಂತ ನವೆಂಬರ್’ನಿಂದ ಆರಂಭಗೊಳ್ಳಲಿದೆ. ಕೆಲ ಕಾರಣಗಳಿಂದ ಟೆಲ್ ಎಂಡ್ ವರೆಗೆ ತಲುಪುತ್ತಿಲ್ಲ ಎಂದರು.
ಇನ್ನು ನಾಗೇಂದ್ರ ಅವರು ರಾಜೀನಾಮೆ ನೀಡಿದ್ದು, ವಿಷಯ ಕ್ಲೋಸ್ ಆಗಿದೆ. ಮುಜುಗರ ಆಗಿದ್ದು, ನಿಜ. ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆ ಅನಾವಶ್ಯಕ. ನಾಗೇಂದ್ರ ಅವರ ಸ್ಥಾನವನ್ನ ಅವರ ಸಮಾಜದವರಿಗೆ ನೀಡ್ತಾರೆ. ಇದರಲ್ಲಿ ಬೇರೆ ಪ್ರಶ್ನೆಯಿಲ್ಲ. ಆದರೇ ಯಾವಾಗ ನೀಡುತ್ತಾರೆಂಬುದನ್ನ ಸರ್ಕಾರ ನಿರ್ಧರಿಸಬೇಕು ಎಂದರು.
ಇನ್ನು ಡಿಸಿಎಂ ವಿಚಾರ ಎಲ್ಲಿಯೂ ಚರ್ಚೆಯಾಗಿಲ್ಲ. ಸಿದ್ಧರಾಮಯ್ಯನವರ ಮನಸ್ಸು ಮಾಡಿದರೇ ನೀವು ಡಿಸಿಎಂ ಆಗುತ್ತಿದ್ದೀರಿ ಎಂಬ ಪ್ರಶ್ನೆಗೆ ಮೊದಲು ಒಬ್ಬರೇ ಡಿಸಿಎಂ ಇದ್ರೂ ಈಗಲೂ ಒಬ್ಬರೇ ಡಿಸಿಎಂ ಇದ್ದಾರೆ. ಡಿಸಿಎಂ ಸ್ಥಾನಕ್ಕೆ ಎಲ್ಲರೂ ಆಕಾಂಕ್ಷಿಗಳೇ. ಸಮಯ ಬರುತ್ತದೆ. ಇನ್ನು 2 ಬಾರಿ ಸ್ಪರ್ಧೆ ಮಾಡಲಿದ್ದೇವೆ. 4-5 ಜನರು ಡಿಸಿಎಂ ಮಾಡಿದರೇ ಅದಕ್ಕೆ ಮಹತ್ವವಿಲ್ಲ ಎಂದರು.
ರಮೇಶ್ ಜಾರಕಿಹೊಳಿ ಸಿದ್ಧರಾಮಯ್ಯನವರ ಭೇಟಿ ಬಗ್ಗೆ ಆರು ತಿಂಗಳಿಗೊಮ್ಮೆ ಭೇಟಿಯಾಗುತ್ತಾರೆ. ಸೋಷಿಯಲ್ ಮಿಡೀಯಾಗೆ ಟ್ಯಾಕ್ಸ್ ಹಾಕಿದರೇ ನಿಯಂತ್ರಣವಾಗಬಹುದೇನೋ. ನಮ್ಮ ಸರ್ಕಾರ ಸುಭದ್ರವಾಗಿದೆ. ಸುಭದ್ರವಾಗಿರಲಿದೆ. ಮಹಿಳಾ ಸಚಿವರನ್ನು ಶೀಘ್ರದಲ್ಲೇ ಪಕ್ಷ ತಿರ್ಮಾನಿಸಿ ನೇಮಿಸಲಿದೆ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಸಾಮಾನ್ಯ ಕಾರ್ಯಕರ್ತರಿಗೆ ನೀಡಲಾಗುವುದು ಎಂದರು. ದೆಹಲಿಗೆ ಕಾಂಗ್ರೆಸ್ ನಗರಾಧ್ಯಕ್ಷರ ಆಯ್ಕೆ ಸೂಚಿಯನ್ನು ಕಳುಹಿಸಲಾಗಿದೆ. ಶೀಘ್ರದಲ್ಲೇ ಹೊಸಬರ ಆಯ್ಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
