Accident

ಕನಿಷ್ಠ ವೇತನ ತಡೆಹಿಡಿದರೆ ಸೆ.2 ರಿಂದ ಬೆಂಗಳೂರಿನಲ್ಲಿ ಎಐಯುಟಿಯಸಿ ಅಹೋರಾತ್ರಿ ಧರಣಿ:; ಚಂದ್ರಶೇಖರ ಮೇಟಿ

Share

ಕಾರ್ಮಿಕರ ಕನಿಷ್ಠ ವೇತನ ನೀಡಲು ಸರಕಾರ ಕಾರ್ಖಾನೆಯ ಮಾಲೀಕರ ಒತ್ತಡಕ್ಕೆ‌ ಮಣಿದು ತಡೆ ಹಿಡಿದಿದೆ. ಸರಕಾರಕ್ಕೆ ಎಚ್ಚರಿಸಲು ಸೆ.2 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಐಯುಟಿಯಸಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಮೇಟಿ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದೂವರೆ ಕೋಟಿ ಕಾರ್ಮಿಕರಿಗೆ ಅನ್ಯಾಯವಾದರೂ ವಿಪಕ್ಷಗಳು ಧ್ವನಿ ಎತ್ತುತ್ತಿಲ್ಲ. ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು ಜನರನ್ನು ಒಡೆದು ಆಳುವ ನೀತಿಯನ್ನು
ರಾಜ್ಯ ಸರಕಾರ ಕನಿಷ್ಠ ವೇತನ ಜಾರಿ ಮಾಡಿ ಆದೇಶ ಹೊರಡಿಸಿತು. ಆದರೆ ಅಂದಿನ ಬಿಜೆಪಿ ಸರಕಾರ ಕೇವಲ 5% ನೀಡಿರುವುದನ್ನು ನಾವು ನ್ಯಾಯಾಲಯಕ್ಕೆ ದಾವೆ ಹೂಡಿದ್ದೇವು. ಅದರಂತೆ ನ್ಯಾಯಾಲಯ ನ್ಯಾಯ ಸಮ್ಮತವಾಗಿ ಜಾರಿ ಮಾಡಬೇಕು ಎಂದು ಸೂಚನೆ ನೀಡಿತ್ತು ಎಂದರು.
ಕಳೆದ ಮೇ.22 ರಂದು 19 ಸಾವಿರ ರೂ. ಕನಿಷ್ಠ ವೇತನ ‌ನೀಡಲು ಜಾರಿಗೆ ಮಾಡಲಾಗಿದೆ. ಆದರೆ ಕಾರ್ಖಾನೆಯ ಮಾಲೀಕರು ಇದನ್ನು ಆಕ್ಷೇಪಿಸಿ ನ್ಯಾಯಾಲಯಕ್ಕೆ ಹೋದಾಗ ಅವರಿಗೆ ಮುಖ ಭಂಗವಾಗಿಯಿತು.‌ ಈಗ ಅವರು ಸರಕಾರದ ಮೂಲಕ ಒತ್ತಡ ಹಾಕಿ ತಡೆ ಹಿಡಿದಿದ್ದಾರೆ ಎಂದು ದೂರಿದರು.

ಕಾರ್ಮಿಕ ಪ್ರತಿನಿಧಿಗಳು, ಉದ್ಯಮಗಳ ಪ್ರತಿನಿಧಿಗಳು ಹಾಗೂ ಕಾರ್ಮಿಕ ಇಲಾಖೆ, ಆರ್ಥಿಕ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳ ಪ್ರತಿನಿಧಿ ಗಳನ್ನು ಒಳಗೊಂಡಿರುವ “ಕನಿಷ್ಠ ವೇತನ ಸಲಹಾ ಮಂಡಳಿ”ಯಲ್ಲಿ ಹಲವಾರು ಸಭೆಗಳನ್ನು ನಡೆಸಿ ಅಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಿದ ನಂತರ ಸರ್ಕಾರವು ದಿನಾಂಕ 22.05.2026ರಂದು 81 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿ ಅಂತಿಮ ಅಧಿಸೂಚನೆ ಸರ್ಕಾರದ ಹೊರಡಿಸಿತ್ತು. ಇದು ಈಗಾಗಲೇ ಸುಧೀರ್ಘ ಒಂಬತ್ತು ವರ್ಷಗಳ ನಂತರದ ಪರಿಷ್ಕರಣೆ ಆಗಿತ್ತು. ಈ ಪರಿಷ್ಕೃತ ವೇತನ ದರಗಳಂತೆ ರಾಜ್ಯ ಇಲಾಖೆಗಳು, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳು ಇದರಂತೆ ಒಂದೆರಡು ತಿಂಗಳುಗಳ ವೇತನವನ್ನು ಸಹ ಪಾವತಿಸಿವೆ ಎಂದರು.
ಆದರೆ ಈ ಹೆಚ್ಚಳವನ್ನು ವಿರೋಧಿಸಿರುವ ಉದ್ಯಮಪತಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯವು ಹಲವು ತಿಂಗಳು ಗಳಿಂದ ಇಲ್ಲಿಯವರೆಗೂ ತಡೆಯಾಜ್ಞೆ ಸಹ ನೀಡಿಲ್ಲ. ಈ ಪ್ರಕರಣವು ಈಗಲೂ ನ್ಯಾಯಾಲಯದಲ್ಲಿದ್ದು, ಸರ್ಕಾರ ಈ ವೇತನ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುತ್ತಿದೆ ಎಂದರು.
ವಿಶ್ವ ವಿದ್ಯಾಲಯ ಗಳು ಮತ್ತಿತರ ಸ್ವಾಯತ್ತ ಸಂಸ್ಥೆಗಳಲ್ಲಿ ಪರಿಷ್ಕೃತ ವೇತನ ಪಾವತಿ ತಡೆಹಿಡಿಯುವುದು ಮತ್ತು ಈ ಆದೇಶ ಮರು ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ ಮಾಡುವುದು ಸಂಪೂರ್ಣ ಅಸಮಂಜಸ ಹಾಗೂ ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದರು.
ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಇನ್ನೂ ಜಾರಿಗೆ ಬರದ 2019 ರ ಕೇಂದ್ರದ ವೇತನ ಸಂಹಿತೆ ಅನುಗುಣವಾಗಿದೆಯೇ ಎಂದು ನೋಡುವುದಾಗಿ ಹೊಸ ನೆಪವನ್ನು ಮುಂದಿಡುತ್ತಿದೆ. ಕಾರ್ಮಿಕ ಕಾಯ್ದೆಗಳ ಬಗ್ಗೆ ಬಲ್ಲವರನ್ನು ಒಳಗೊಂಡ “ಕನಿಷ್ಠ ವೇತನ ಸಲಹಾ ಎಂಡಳಿ” ಚರ್ಚಿಸಿ ತೀರ್ಮಾನಿಸಿರುವ, ಹೈಕೋರ್ಟನಲ್ಲಿ ಈ ಬಗ್ಗೆಯೇ ಅಲ್ಲಿ ಪರಾಮರ್ಶೆ ತೆಯುತ್ತಿರುವುದರಿಂದ ತೀರ್ಪಿಗೆ ಕಾಯದೆ, ಸಂಪುಟ ಉಪ ಸಮಿತಿ ರಚಿಸುವ, ಪರಿಷಕೃತ ಕನಿಷ್ಕ, ವೇತನ – ತಡೆಯುವ ಅಗತ್ಯವೇ ಇರಲಿಲ್ಲ ಎಂದರು. byte

ಜಿ. ಹನುಮೇಶ್, ಅಮರ್, ಸುನೀಲ್, ಗೀತಾ ರಾಯಗೋಳ ಸೇರಿದಂತೆ ‌ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!