Belagavi

‘ಇನ್ ನ್ಯೂಸ್’ ಸಿಬ್ಬಂದಿಗೆ ರಾಕಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬ್ರಹ್ಮಕುಮಾರಿ ಸಹೋದರಿಯರು…

Share

ಪವಿತ್ರ ರಕ್ಷಾ ಬಂಧನದ ಸಂಭ್ರಮದಲ್ಲಿ ಬೆಳಗಾವಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ‘ಇನ್ ನ್ಯೂಸ್’ ಕಾರ್ಯಾಲಯಕ್ಕೆ ಭೇಟಿ ನೀಡಿ ವಿಶೇಷವಾಗಿ ಹಬ್ಬ ಆಚರಿಸಿದರು.

ನಮ್ಮ ಬೆಳಗಾವಿಯ ‘ಇನ್ ನ್ಯೂಸ್’ ಸುದ್ದಿವಾಹಿನಿ ಕಾರ್ಯಾಲಯಕ್ಕೆ ಬ್ರಹ್ಮಕುಮಾರಿ ಸಹೋದರಿಯರು ಭೇಟಿ ನೀಡಿ ರಕ್ಷಾ ಬಂಧನ ಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸಿದರು. ಸಂಸ್ಥೆಯ ಸಂಪಾದಕರಾದ ರಾಜಶೇಖರ್ ಪಾಟೀಲ್, ಅವರ ಸುಪುತ್ರಿ ಹಾಗೂ ಕಾರ್ಯಾಲಯದ ಸಮಸ್ತ ಸಿಬ್ಬಂದಿಗೆ ಸಹೋದರಿ ಮಂಜುಳಾ ಮತ್ತು ಸುನೀತಾ ಮೂಲಿಮನಿ ಅವರು ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಸಹೋದರಿ ಮಂಜುಳಾ ಅವರು ರಾಖಿಯ ಪಾವಿತ್ರ್ಯತೆ, ರಕ್ಷಾ ಬಂಧನದ ಐತಿಹಾಸಿಕ ಹಿನ್ನೆಲೆ ಹಾಗೂ ಹಬ್ಬದ ವೇಳೆ ಸಿಹಿ ತಿನ್ನಿಸುವುದರ ಆಧ್ಯಾತ್ಮಿಕ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು. ಈ ಹಬ್ಬವು ನಮ್ಮಲ್ಲಿ ಪರಸ್ಪರ ನಂಬಿಕೆ, ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲಿ. ನಮ್ಮ ಸಮಾಜದಲ್ಲಿ ಎಲ್ಲರೂ ಅಣ್ಣ-ತಂಗಿಯರಂತೆ ಅನ್ಯೂನ್ಯವಾಗಿ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ವಿಶೇಷ ಮುಖ್ಯಾತಿಯಾಗಿ, ಸಮಾಜದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮತ್ತು ದುಶ್ಚಟಗಳಿಂದ ದೂರವಿರುವ ಕುರಿತು ವ್ಯಸನ ಮುಕ್ತಿಗಾಗಿ ವಿಶೇಷ ಪ್ರಮಾಣವಚನವನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಕಾಂತ್ ಸೇರಿದಂತೆ ಕಾರ್ಯಾಲಯದ ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು ಪರಸ್ಪರ ಶುಭ ಕೋರಿದರು.

Tags:

error: Content is protected !!