Belagavi

ಬೆಳಗಾವಿಯಲ್ಲಿ ರಿಕ್ಷಾ ಚಾಲಕರಿಗೆ ರಾಕಿ ಕಟ್ಟಿ ಅರ್ಥಪೂರ್ಣ ರಕ್ಷಾಬಂಧನದ ಆಚರಣೆ

Share

ಬೆಳಗಾವಿಯಲ್ಲಿ ರಿಕ್ಷಾ ಚಾಲಕರೊಂದಿಗೆ ವಿಭಿನ್ನವಾಗಿ ರಕ್ಷಾಬಂಧನ ಆಚರಿಸಲಾಗಿದೆ. ಸಮಾಜಸೇವಕಿ ಮಂದಾ ನೇವಗಿ ಅವರು ಚಾಲಕರಿಗೆ ರಾಖಿ ಕಟ್ಟಿ ಹಬ್ಬದ ಶುಭಕೋರಿದ್ದಾರೆ.

ಬೆಳಗಾವಿಯ ಗೋಂಧಳಿ ಗಲ್ಲಿಯ ಸ್ವಾಮಿ ವಿವೇಕಾನಂದ ರಿಕ್ಷಾ ಸ್ಟ್ಯಾಂಡ್‌ನಲ್ಲಿ ಬಬನ ಭೋಬೆ ಮಿತ್ರ ಮಂಡಳದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಮಾಜಸೇವಕಿ ಮಂದಾ ನೇವಗಿ ಅವರು ರಿಕ್ಷಾ ಚಾಲಕರಿಗೆ ರಾಖಿ ಕಟ್ಟಿ ಸತ್ಕರಿಸಿದರೆ, ಹನುಮಾನ್ ನಗರದ ದೇಶಪಾಂಡೆ ಬೇಕರಿ ಮಾಲೀಕ ಸಂದೇಶ ದೇಶಪಾಂಡೆ ಅವರು ಚಾಲಕರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದರು. ಪ್ರತಿದಿನ ಕಷ್ಟಪಟ್ಟು ಜನರನ್ನು ತಲುಪಿಸುವ ರಿಕ್ಷಾ ಚಾಲಕರಿಗೆ ಹಬ್ಬದ ದಿನದಂದು ಸಿಕ್ಕ ಈ ವಿಶಿಷ್ಟ ಗೌರವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಾರ್ಯಕ್ರಮದಲ್ಲಿ ವಿನಾಯಕ ಪೂಜಾರಿ, ಮಹೇಶ್ ಕಿಲ್ಲೇಕರ, ನಾಗಪ್ಪ ತೋರಣಕಟ್ಟಿ, ವಿಜಯ್ ಖಾಮಕರ ಸೇರಿದಂತೆ ಮಂಡಳದ ಹಲವು ಪ್ರಮುಖರು ಉಪಸ್ಥಿತರಿದ್ದು ಸಂಭ್ರಮದಲ್ಲಿ ಭಾಗಿಯಾದರು.

Tags:

error: Content is protected !!