ಬೆಳಗಾವಿಯ ಉದ್ಯಮಬಾಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ನಿಲ್ಲಿಸಿದ್ದ ವಾಹನಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನೋ-ಪಾರ್ಕಿಂಗ್ ವಲಯದಲ್ಲಿ ನಿಂತಿದ್ದ ವಾಹನಗಳಿಗೆ ಲಾಕ್ ಮಾಡುವ ಮೂಲಕ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಪೊಲೀಸರು ಮುಂದಾಗಿದ್ದು, ನಿಷೇಧಿತ ಪ್ರದೇಶಗಳಲ್ಲಿ ಅಸಡ್ಡೆಯಿಂದ ವಾಹನ ನಿಲ್ಲಿಸುವ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಉದ್ಯಮಬಾಗ ರಸ್ತೆಯ ಫಾರ್ಚೂನ್ ಟವರ್ ಸಮೀಪದ ನೋ-ಪಾರ್ಕಿಂಗ್ ವಲಯದಲ್ಲಿ ಸಂಚಾರಿ ಪೊಲೀಸರು ಕಠಿಣ ಕಾರ್ಯಾಚರಣೆ ನಡೆಸಿದ್ದಾರೆ. ನಿಯಮ ಮೀರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದ್ದ ಕಾರಣ ಸವಾರರಿಗೆ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಪೊಲೀಸರು ಅಂತಹ ವಾಹನಗಳಿಗೆ ಲಾಕ್ ಹಾಕುವ ಮೂಲಕ ಕಠಿಣ ಕ್ರಮ ಜರುಗಿಸಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡಲು ಈ ರೀತಿಯ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

