Belagavi

ಶಹಾಪುರ ನಾಥ್‌ ಪೈ ವೃತ್ತದ ಸಾರ್ವಜನಿಕ ಗಣೇಶೋತ್ಸವ ಮಂಟಪ ನಿರ್ಮಾಣಕ್ಕೆ ವಿದ್ಯುಕ್ತ ಚಾಲನೆ

Share

ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಸಿದ್ಧತೆಗಳು ಬಿರುಸುಗೊಂಡಿವೆ. ಶಹಾಪುರ ನಾಥ್‌ ಪೈ ವೃತ್ತದ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಮಹಾನಗರದಲ್ಲಿ ಗಣೇಶನ ಆಗಮನದ ಕಾತರ ಮತ್ತಷ್ಟು ಹೆಚ್ಚಾಗಿದೆ.

ನೂಲ ಹುಣ್ಣುಮೆಯ ಸಂಭ್ರಮದ ಬೆನ್ನಲ್ಲೇ ಬೆಳಗಾವಿಯ ಶಹಾಪುರ ಬ್ಯಾರಿಸ್ಟರ್ ನಾಥ್ ಪೈ ವೃತ್ತದ ಸಾರ್ವಜನಿಕ ಗಣೇಶೋತ್ಸವ ಮಂಡಪದ ಮುಹೂರ್ತ ಸಮಾರಂಭವು ವಿಧ್ಯುಕ್ತವಾಗಿ ನೆರವೇರಿತು.

ಬ್ರಹ್ಮಕುಮಾರಿ ರಾಧಿಕಾ ದೀದಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸೋಮಶೇಖರ್ ಸುತಾರ್ ಅವರ ದಿವ್ಯ ಹಸ್ತದಿಂದ ಬೆಳಗಾವಿಯ ಶಹಾಪುರ ಬ್ಯಾರಿಸ್ಟರ್ ನಾಥ್ ಪೈ ವೃತ್ತದ ಸಾರ್ವಜನಿಕ ಗಣೇಶೋತ್ಸವ ಮಂಡಪ ನಿರ್ಮಾಣಕ್ಕೆ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಕಳೆದ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಂಡಿದ್ದ ಈ ಮಂಡಳಿಯು, ಪ್ರಸಕ್ತ ಸಾಲಿನಲ್ಲಿಯೂ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈದ್ಯಕೀಯ ಸೇವಾ ಕಾರ್ಯಗಳೊಂದಿಗೆ ಹಬ್ಬವನ್ನು ಅತ್ಯಂತ ಭವ್ಯವಾಗಿ ಆಚರಿಸಲು ಸಜ್ಜಾಗಿದೆ.

ಸಚಿನ್ ರಂಗರೇಜ್ (ಮಂಡಳದ ಉಪಾಧ್ಯಕ್ಷ), ಸಚಿನ್ ಪವಾರ್ (ಕಾರ್ಯಾಧ್ಯಕ್ಷ), ಲಕ್ಷ್ಮಣ್ ಛತ್ರಣವರ್ ಮತ್ತು ಅಕ್ಷಯ್ ಶಿಂಧೆ (ಸೆಕ್ರೆಟರಿ), ಶಂಕರ್ ಚವಾಣ್ (ಖಜಾನಿ), ಪ್ರದೀಪ್ ಕಾವಳೆ (ಹಿಸೋಬ್ ತಪಾಸಣೀಸ್), ಅಣ್ಣಪ್ಪ ಮುಂಗಳೀಕರ್, ಸದಾನಂದ ಕಡಗಾವ್ಕರ್, ಋಷಿಕೇಶ್ ಹೆಬ್ಬಳಿ, ಶ್ರೀಕಾಂತ್ ಕಾಕತೀಕರ್ (ಸಲಹೆಗಾರರು), ವಿಜಯ್ ಧಾಮಣೇಕರ್, ಮಹಾದೇವ ಪಾಟೀಲ್, ಸದಾನಂದ ಕದಮ್, ವಿಜಯ್ ಸಾಮಜಿ, ಗೋಪಾಲ್ ಸಾವಂತ್. ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!