Vijaypura

ವಿಜಯಪುರ ಜಿಲ್ಲೆಯಲ್ಲಿ ಕಳ್ಳರ ಹಾವಳಿ; ಒಂದೇ ರಾತ್ರಿ 3 ಕಡೆ ಶಟರ್ ಮುರಿದು ಕಳ್ಳತನ!

Share

ವಿಜಯಪುರ ಜಿಲ್ಲೆಯಲ್ಲಿ ಮುಸುಕುಧಾರಿ ಕಳ್ಳರ ಕೈಚಳಕ ಮುಂದುವರೆದಿದೆ. ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ನಾಲ್ವರು ಮುಸುಕುಧಾರಿ ಕಳ್ಳರು ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡಿದ್ದಾರೆ…

ರೈತ ಸಂಪರ್ಕ ಕೇಂದ್ರ, ಖಾಸಗಿ ರಸಗೊಬ್ಬರ ಅಂಗಡಿ ಹಾಗೂ ಹಾರ್ಡವೇರ್ ಅಂಗಡಿಯನ್ನು ಟಾರ್ಗೆಟ್ ಮಾಡಿರುವ ಕಳ್ಳರು, ಶಟರ್ ಮುರಿದು ಒಳನುಗ್ಗಿ ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ… ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಲ್ವರು ಮುಸುಕುಧಾರಿಗಳು ಕಳ್ಳತನ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ… ಘಟನೆ ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

Tags:

error: Content is protected !!