Belagavi

ಬೆಳಗಾವಿ: ಖಡೇ ಬಜಾರ್ ಗಣಪತ ಗಲ್ಲಿಯಲ್ಲಿ ಎಲ್ ಅಂಡ್ ಟಿ ಕಾಮಗಾರಿಯಿಂದ ಭಾರಿ ಟ್ರಾಫಿಕ್ ಜಾಮ್; ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

Share

ಬೆಳಗಾವಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಖಡೇ ಬಜಾರ್‌ನ ಗಣಪತ ಗಲ್ಲಿ ಕಾರ್ನರ್‌ನಲ್ಲಿ ಎಲ್ ಅಂಡ್ ಟಿ ಕಾಮಗಾರಿಯಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಹಬ್ಬದ ಸೀಸನ್‌ನಲ್ಲಿಯೇ ರಸ್ತೆ ಅಗೆದಿರುವುದರಿಂದ ಸಾರ್ವಜನಿಕರು ಮತ್ತು ಹೊರರಾಜ್ಯದಿಂದ ಬರುವ ಗ್ರಾಹಕರು ತೀವ್ರ ಪರದಾಡುವಂತಾಗಿದೆ.

ಬೆಳಗಾವಿಯ ಜನನಿಬಿಡ ಪ್ರದೇಶವಾದ ಖಡೇ ಬಜಾರ್ ಮತ್ತು ಗಣಪತ ಗಲ್ಲಿ ಕಾರ್ನರ್ ಬಳಿ ಎಲ್ ಅಂಡ್ ಟಿ (L&T) ಕಂಪನಿಯ ಕಾಮಗಾರಿಯಿಂದ ರಸ್ತೆಯ ಒಂದು ಬದಿ ಸಂಪೂರ್ಣ ಬಂದ್ ಆಗಿದ್ದು, ತೀವ್ರ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಪ್ರಮುಖ ವಾಣಿಜ್ಯ ಮಾರುಕಟ್ಟೆಯಾಗಿರುವ ಇಲ್ಲಿ ಸನಾತನ ಹಬ್ಬಗಳ ಸಂಭ್ರಮದ ಖರೀದಿ ಜೋರಾಗಿರುವಾಗಲೇ ರಸ್ತೆಗೆ ಅಡ್ಡಲಾಗಿ ದೊಡ್ಡ ಗುಂಡಿ ತೋಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಯಾವುದೇ ಟ್ರಾಫಿಕ್ ಪೊಲೀಸರು ಇಲ್ಲದಿರುವುದರಿಂದ ವಾಹನಗಳ ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹೊರೂರಿನಿಂದ ಬರುವ ನಾಗರಿಕರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಚಾರ ದಟ್ಟಣೆ ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!