ಒಂದೆಡೆ ವಿದ್ಯುತ್ ಉಳಿಸಿ ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಆಡಳಿತ ಯಂತ್ರ, ಮತ್ತೊಂದೆಡೆ ಹಗಲು ವೇಳೆಯಲ್ಲೇ ಬೀದಿ ದೀಪಗಳು ಉರಿಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಜೂನಾ ಬೆಳಗಾವಿ ನಾಕಾದ ಯೆಡಿಯೂರಪ್ಪ ರಸ್ತೆಯಲ್ಲಿ ಬರೋಬ್ಬರಿ ಹದಿನೇಳು ಕಂಬಗಳ ಲೈಟ್‌ಗಳು ಸತತವಾಗಿ ಆನ್ ಆಗಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹಳೆಯ ಬೆಳಗಾವಿ ನಾಕಾ ಸಮೀಪವಿರುವ ಯೆಡಿಯೂರಪ್ಪ ರಸ್ತೆಯಲ್ಲಿ ಹಗಲು ವೇಳೆಯಲ್ಲೂ ಬೀದಿ ದೀಪಗಳು ಉರಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಬರೋಬ್ಬರಿ ೧೭ ಕಂಬಗಳ ಮೇಲಿನ ಸ್ಟ್ರೀಟ್ ಲೈಟ್‌ಗಳು ನಿನ್ನೆಯಿಂದ ಸತತವಾಗಿ ಆನ್ ಆಗಿದ್ದು, ಯಾವುದೇ ಅಡೆತಡೆಯಿಲ್ಲದೆ ಹಗಲಿನಲ್ಲಿಯೂ ಬೆಳಗುತ್ತಿವೆ. ಇದರಿಂದ ಸಾರ್ವಜನಿಕರ ಹಣ ಹಾಗೂ ಅಮೂಲ್ಯವಾದ ವಿದ್ಯುತ್ ಪೋಲಾಗುತ್ತಿದ್ದು, ಸ್ಥಳೀಯ ಆಡಳಿತ ಹಾಗೂ ನಿರ್ವಹಣಾ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
