ಖಾನಾಪೂರ ತಾಲೂಕಿನ ಬೇಕವಾಡ ದಿಂದ ಕಡತನಬಾಗೇವಾಡಿ ರಸ್ತೆ ಸಂಪೂರ್ಣ ತೆಗ್ಗು ಗುಂಡಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಬೇಕವಾಡ ಗ್ರಾಮದ ಪಂಚಾಯಿತಿ ರಸ್ತೆಯ ಸ್ವಲ್ಪ ಮುಂದೆಯೇ ದೊಡ್ಡ ಆಕಾರದ ತೆಗ್ಗು ಬಿದ್ದು ಸಂಚರಿಸುತ್ತಿದ್ದ ಟಿಪ್ಪರ್ ಸಿಲುಕಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಹೆಜ್ಜೆ ಮುಂದಾಗಿ ಯಾರೂ ಒಬ್ಬರು ಈ ರಸ್ತೆ ಮೇಲೆ ಗಿಡ ನೆಡುವ ಮೂಲಕ ವನಮಹೋತ್ಸವ ಕೂಡಾ ಮಾಡಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗುತ್ತಿದೆ.


ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
