Belagavi

ಬೆಳಗಾವಿಯಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಜಿಮ್ ‘PR16’ ಪ್ರಾರಂಭ:

Share

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಹಿಳೆಯರ ಆರೋಗ್ಯ, ದೈಹಿಕ ಫಿಟ್ನೆಸ್ ಹಾಗೂ ಆತ್ಮರಕ್ಷಣೆಗಾಗಿ ‘PR16 Women’s Fitness and Combat Sports’ ನೂತನ ಜಿಮ್ ಶುಭಾರಂಭಗೊಂಡಿದೆ. ಶಾಸಕ ಆಸೀಫ್ ಸೇಠ್, ರಾಹುಲ್ ಜಾರಕಿಹೊಳಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿ, ಸಂಸ್ಥೆಗೆ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.

ಶುಭ ಶುಕ್ರವಾರದಂದು ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಹಿಳೆಯರ ಆರೋಗ್ಯ ಹಾಗೂ ದೈಹಿಕ ಫಿಟ್ನೆಸ್‌ಗೆ ಉತ್ತೇಜನ ನೀಡುವ ಸಲುವಾಗಿ ‘PR16 Women’s Fitness and Combat Sports’ ಜಿಮ್ ಅನ್ನು ಅದ್ಧೂರಿಯಾಗಿ ಚಾಲನೆಗೊಳಿಸಲಾಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್, ಯುವ ಕಾಂಗ್ರೆಸ್ ನಾಯಕ ರಾಹುಲ್ ಜಾರಕಿಹೊಳಿ, ಉಪಮೇಯರ್ ಹನುಮಂತ ಕೊಂಗಾಲಿ, ಯುವ ನಾಯಕ ತಾಹೀರ್ ಸಯ್ಯದ್, ಮಾಳಮಾರುತಿ ಠಾಣೆ ಪಿಎಸ್‌ಐ ಶ್ರೀಶೈಲ ಹುಲಗೆರೆ, ಪಿಎ ಅರವಿಂದ ಕಾರಚಿ, ಶಕೀರ್ ಕಿತ್ತೂರ್, ಸಮಾಜ ಸೇವಕರಾದ ಸುರೇಶ್ ಯಾದವ್, ಅಫ್ರೋಜ್ ಸನದಿ ಹಾಗೂ ಇಂಟರ್ನ್ಯಾಷನಲ್ ಜೂಡೋ ಕೋಚ್ ರೋಹಿಣಿ ಪಾಟೀಲ್ ಭಾಗವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಆಸೀಫ್ ಸೇಠ್, ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡಿ ಇಂತಹ ಕೇಂದ್ರ ತೆರೆದಿರುವುದು ಶ್ಲಾಘನೀಯ ಎಂದರು.

ಜಿಮ್‌ನ ಮುಖ್ಯಸ್ಥರಾದ ಅಂಜಲಿ ಅಕ್ಷಯ್ ಘಸಾರಿ ಮಾತನಾಡಿ, ಮಹಿಳೆಯರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು. ಈ ಜಿಮ್‌ನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಅರ್ಹ ಮಹಿಳಾ ತರಬೇತುದಾರರನ್ನು ನೇಮಕ ಮಾಡಲಾಗಿದ್ದು, ಏರೋಬಿಕ್ಸ್, ಯೋಗ ಹಾಗೂ ಜುಂಬಾ ತರಬೇತಿ ನೀಡಲಾಗುತ್ತದೆ. ನಗರದ ಮಹಿಳೆಯರು ಈ ಕೇಂದ್ರದ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಇನ್ನು ಈ ಸಂಸ್ಥೆಯಲ್ಲಿ ಮಹಿಳೆಯರ ಫಿಟ್ನೆಸ್ ಜೊತೆಗೆ ಮಕ್ಕಳು ಹಾಗೂ ಬಾಲಕಿಯರಿಗಾಗಿ ಜೂಡೋ (ಮಾರ್ಷಲ್ ಆರ್ಟ್ಸ್) ವಿಶೇಷ ತರಬೇತಿಯನ್ನು ಸಹ ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಮಟ್ಟದ ಪದಕ ವಿಜೇತ ತರಬೇತುದಾರರು ಇಲ್ಲಿ ಮಕ್ಕಳಿಗೆ ತರಬೇತಿ ನೀಡಲಿದ್ದು, ಭವಿಷ್ಯದಲ್ಲಿ ಕಾಮನ್‌ವೆಲ್ತ್ ಹಾಗೂ ಒಲಿಂಪಿಕ್ಸ್ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಉನ್ನತ ಕ್ರೀಡಾಪಟುಗಳನ್ನು ಬೆಳೆಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮತ್ತು ಆತ್ಮರಕ್ಷಣೆಯ ಕೌಶಲ ಕಲಿಯಲು ಈ ಕೇಂದ್ರ ಅತ್ಯಂತ ಉಪಯುಕ್ತವಾಗಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.ಬೈಟ್
ಸಂಸ್ಥೆಯ ಸಹ-ಸಂಸ್ಥಾಪಕರಾದ ಜ್ಯೋತಿ ಕಂಗ್ರಾಳಕರ್ ಹಾಗೂ ಅಂಜಲಿ ಅಕ್ಷಯ್ ಘಸಾರಿ ಅವರು ಈ ಜಿಮ್‌ ಸ್ಥಾಪಿಸಿದ್ದು, ತರಬೇತುದಾರರಾಗಿ ಸಹನಾ ಎಸ್.ಆರ್. ಕಾರ್ಯನಿರ್ವಹಿಸಲಿದ್ದಾರೆ.

Tags:

error: Content is protected !!