Chikkodi

ಟೇಕ್ವಾಂಡೋ: ಸಿಟಿಇ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

Share

ಬೆಂಗಳೂರಿನ ಕೋರಮಂಗಲದಲ್ಲಿ ನಡೆದ 43ನೇ ರಾಜ್ಯ ಟೇಕ್ವಾಂಡೋ ಚಾಂಪಿಯನ್‌ಶಿಪ್‌–2026ರ ಕ್ಯೂರೋಗಿ ಹಾಗೂ ಪೂಮ್ಮೆ ವಿಭಾಗಗಳ ಸ್ಪರ್ಧೆಯಲ್ಲಿ ಪಟ್ಟಣದ ಸಿಟಿಇ ಸಂಸ್ಥೆಯ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 20 ಪದಕಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಪೂಮ್ಮೆ ವಿಭಾಗದಲ್ಲಿ ವಿಧಿ ಎಸ್. ಮಾಂಜರೇಕರ್, ಆರ್ಯನ್ ಎ. ಒಡೆಯರ್, ಈಶ್ವರಿ ಕುಲಕರ್ಣಿ ಹಾಗೂ ವೇದಾಂತ ಜಾಧವ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಿಶಾಂತ್ ಎ. ಮೆಂಡಿಗೇರಿ, ಅನೋಕಿ ಚೌರಾಸಿಯಾ, ಪ್ರಿಯಾ ಎಸ್. ಖಡಕಭಾವಿ, ಸಾನ್ವಿಕಾ ಪಿ. ಪಾಟೀಲ ಹಾಗೂ ಜಿಯಾನ ದಫೇದಾರ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೇ ವಿಭಾಗದಲ್ಲಿ ಅನನ್ಯ ಆರ್. ಚೌರಾಸಿಯಾ, ಪಲ್ಲವಿ ಎಸ್. ನಂದಿಕೋಲ್ಮಠ, ಅತಿಕ್ ಆರ್. ನದಾಫ್, ಸಾಯಿ ಎಸ್. ಶಿಂಧೆ, ಅಭಿಷೇಕ್ ವೈ. ಘಾಟಗೆ, ನಿಶಾಂತ್ ಎ. ಮೆಂಡಿಗೇರಿ ಹಾಗೂ ಶುಭ್ರಾ ವಾಗ್ರೇಕರ್ ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಕ್ಯೂರೋಗಿ ವಿಭಾಗದಲ್ಲಿ ರಸೂಲ್ ಆರ್. ದೂದ್ದೀರ, ಆರ್ಯನ್ ಎ. ಒಡೆಯರ್ ಹಾಗೂ ಸಮರ್ಥ ಮನ್ನವಡ್ಡರ ಚಿನ್ನದ ಪದಕಗಳನ್ನು ಗೆದ್ದರೆ, ಕುಮಾರ್ ನಿಶಾಂತ್ ಮೆಂಡಿಗೇರಿ ಬೆಳ್ಳಿ ಪದಕ ಪಡೆದು ಗಮನ ಸೆಳೆದರು.
ಒಟ್ಟಾರೆ ಶಾಲೆಯ ವಿದ್ಯಾರ್ಥಿಗಳು 6 ಚಿನ್ನ, 5 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ 20 ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತಾಧಿಕಾರಿ ಡಾ. ಮಿಥುನ ಎಸ್. ದೇಶಪಾಂಡೆ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಥೋಂಬರೆ, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Tags:

error: Content is protected !!