hubbali

ಸಚಿವ ಸ್ಥಾನದಲ್ಲಿಯಾವ ಖಾತೆ ಸಿಗುತ್ತದೆ ಖುಷಿಯಿಂದ ನಿರ್ವಹಣೆ ಮಾಡುತ್ತೇನೆ : ಸಚಿವ ಸಂತೋಷ್ ಲಾಡ್

Share

ಎರಡು ಮೂರು ದಿನಗಳಲ್ಲಿ ಖಾತೆ ಹಂಚಿಕೆ ಆಗಬಹುದು. ಯಾವ ಖಾತೆ ಸಿಗುತ್ತದೆಯೋ ಅದನ್ನು ಖುಷಿಯಿಂದ ನಿರ್ವಹಣೆ ಮಾಡುತ್ತೇನೆ ಎಂದು ನೂತನ ಸಚಿವ ಸಂತೋಷ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಖಾತೆ ಹಂಚಿಕೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಚಿವ ಸ್ಥಾನ ವಂಚಿತರಿಗೆ ಅರ್ಹತೆ ಇಲ್ಲ ಅಂತ ಅಲ್ಲ. ಎಲ್ಲರಿಗೂ ಅರ್ಹತೆ ಇದೆ. ನಾನು ಈ ವಿಚಾರದಲ್ಲಿ ಅದೃಷ್ಟವಂತ ಎಂದು ಭಾವಿಸುತ್ತೇನೆ. ನನಗೆ ಯಾವುದೇ ಖಾತೆ ಕೊಟ್ಟರೂ ಕೂಡಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. Gen-Z ಯಿಂದ ಹೊಸ ಬದಲಾವಣೆಗಳು ಆಗುತ್ತಿವೆ. ಬಿಜೆಪಿಯರು ಫೇರ್ ಎಲೆಕ್ಷನ್ ಮಾಡಿದರೇ ಖಂಡಿತ ಸೋಲುತ್ತಾರೆ. ಹೀಗಾಗಿ ಅವರು ನ್ಯಾಯಯುತ ಚುನಾವಣೆ ಮಾಡಲು ಬಿಡುವುದಿಲ್ಲ. ಜನರ ಪ್ರಶ್ನೆಗಳಿಗೆ ಅವರು ಉತ್ತರಿಸುವುದಿಲ್ಲ, ಬದಲಾಗಿ ಧರ್ಮ, ದೇವರ ಹೆಸರಿನಲ್ಲಿ ಮಾತ್ರ ರಾಜಕಾರಣ ಮಾಡುತ್ತಾರೆ .
ದೇಶದ ಪ್ರಧಾನಿ ಅವರು ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಹಾಗಾದರೆ ದುಡ್ಡಿನ ಬಗ್ಗೆ ಯಾರು ಕೇಳಬೇಕು? ಬಿಜೆಪಿಯವರು ಕಾಂಗ್ರೆಸ್ ನ ಇಪ್ಪತ್ತು ಸಾವಿರ ಕೋಟಿ ಬಗ್ಗೆ ಇಲ್ಲಿಯವರೆಗೆ ಉತ್ತರ ನೀಡುತ್ತಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ನಮಗೆ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳುತ್ತಿದೆ. ಹಾಗಾದರೆ ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದ ಅವರು ಭ್ರಷ್ಟಾಚಾರದಲ್ಲಿ ಇಡೀ ದೇಶವನ್ನೇ ಮುಳಗಿಸಿದ್ದಾರೆಂದು ದೂರಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದೊಡ್ಡ ಅಭಿವೃದ್ಧಿ ಆಗಿದೆ ಅಂತ ಬಿಂಬಿಸುತ್ತಾರೆಂದರು.

ಬರ ಅಧ್ಯಯನ ಮಾಡಲು ಸಿಎಂ ಸೂಚಿಸಿದ್ದಾರೆ:
ಸಿಎಂ ಡಿ.ಕೆ.ಶಿವಕುಮಾರ್ ಅವರು ಬರ ವೀಕ್ಷಣೆ ಮಾಡುವಂತೆ ಎಲ್ಲ ಸಚಿವರಿಗೂ ತಾಕೀತು ಮಾಡಿದ್ದಾರೆ. ಅದರಂತೆ ಎಲ್ಲಾ ತಾಲೂಕುಗಳಿಗೆ ಹೋಗಿ ಅಧ್ಯಯನ ಮಾಡಿ ವರದಿ ನೀಡುತ್ತೇವೆ ಎಂದರು.
ಬಿಜೆಪಿಯವರು ಬರ ಅಧ್ಯಯನ ಮಾಡುತ್ತಿರುವುದು ಒಳ್ಳೆಯದು. ಅವರು ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ. ಕೇಂದ್ರದಿಂದ ನಮಗೆ ಅಧ್ಯಯನ ಸಹಕಾರ ಸಿಕ್ಕಿಲ್ಲ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಮಲತಾಯಿ ಧೋರಣೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರದ ಹಣ ಬಂದಿಲ್ಲ. ಬೆಳೆ ವಿಮೆ ನಾರ್ಮ್ಸ್ ಬದಲಾವಣೆ ಆಗಬೇಕು. ರೈತರು ಮಧ್ಯಂತರ ಪರಿಹಾರ ಕೇಳುತ್ತಿರುವುದು ಸರಿಯಿದೆ ಎಂದರು.

Tags:

error: Content is protected !!