hubbali

ಟ್ರ್ಯಾಕ್ಟರ್ ಪಲ್ಟಿ ಓರ್ವ ರೈತ ಸಾವು ! ಹಲವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Share

ಹೊಲಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತನೋರ್ವ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಹೌದು ! ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಿಂದ ಹೊಲಕ್ಕೆ ರಸಗೊಬ್ಬರ ಹಾಕಲು ಆಳುಗಳ ಸಮೇತ ಹೊರಟಿದ್ದ ಟ್ರ್ಯಾಕ್ಟರ್ ರೈತನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ‌ ಎನ್ನಲಾಗಿದೆ.ಟ್ರ್ಯಾಕ್ಟರ್ ಪಲ್ಟಿ ರಭಸಕ್ಕೆ ಇಂಜಿನ್ ಹುಕ್ಕಾ ಕಟ್ ಆಗಿ ಟೇಲರ್ ಮತ್ತು ಇಂಜಿನ್ ಬೇರ್ಪಟ್ಟು ಟೇಲರ್ ಒಳಗೆ ಕುಳಿತ ರೈತ ತಿಪ್ಪಣ್ಣ ಕುರಟ್ಟಿ ಎಂಬುವವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ವೇಳೆ ಟ್ರ್ಯಾಕ್ಟರ್ ಚಾಲಕನ ಕಾಲು ಕಟ್ ಆಗಿದೆ ಎಂಬ ಮಾಹಿತಿ ಇದ್ದು, ಮೃತ ರೈತ ತಿಪ್ಪಣ್ಣ ಕುರಟ್ಟಿ ಕುಟುಂಬಸ್ಥರು ರೋಧಿಸುವ ದೃಶ್ಯಗಳು ಮತ್ತು ಅಪಘಾತ ಹಳ್ಳಿಯನ್ನೇ ಬೆಚ್ಚಿ ಬೀಳಿಸಿದೆ.ಟ್ರ್ಯಾಕ್ಟರ್ ಟೇಲರ್ ಒಳಗೆ ಕುಳಿತಿದ್ದ ರೈತ ಮಹಿಳೆಯರಿಗೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ತಹಶೀಲ್ದಾರ್ ರಾಜು ಮಾವರಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!