ಪ್ರಕೃತಿ ವಿಕೋಪ, ಪ್ರವಾಹ ಹಾಗೂ ತುರ್ತು ಸಂದರ್ಭಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರ ರಕ್ಷಣೆಗೆ ಧಾವಿಸುವ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಸಿಬ್ಬಂದಿಯ ಕಾರ್ಯಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆಸೀಫ್ ರಾಜು ಸೇಠ್ ಫೌಂಡೇಶನ್ ವತಿಯಿಂದ ಸಿಬ್ಬಂದಿಗೆ ಅಗತ್ಯ ಸಲಕರಣೆ ಹಾಗೂ ಪ್ರೋತ್ಸಾಹಕ ಕೊಡುಗೆಗಳನ್ನು ನೀಡಿ ಗೌರವಿಸಲಾಯಿತು.


ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೇಠ್ ಅವರು ತಮ್ಮ ಆಸಿಫ್ ರಾಜು ಸೇಠ್ ಫೌಂಡೇಶನ್ ಮೂಲಕ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಸಿಬ್ಬಂದಿಗೆ 200 ಟೀ-ಶರ್ಟ್‌ಗಳು ಹಾಗೂ ರಕ್ಷಣಾ ಕಾರ್ಯಚರಣೆಗೆ ಅಗತ್ಯವಿರುವ ಮರ ಕತ್ತರಿಸುವ ಸಾ-ಮೆಷಿನ್ (Saw Machine) ಉಪಕರಣಗಳನ್ನು ಗೌರವಪೂರ್ವಕವಾಗಿ ವಿತರಿಸಿದರು. ಪ್ರಕೃತಿ ವಿಕೋಪ ಹಾಗೂ ಸಂಕಷ್ಟದ ಸಮಯಗಳಲ್ಲಿ SDRF ಮತ್ತು ಪೊಲೀಸ್ ಸಿಬ್ಬಂದಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಅವರ ಅಚಲ ಬದ್ಧತೆಗೆ ಕೃತಜ್ಞತೆ ಸಲ್ಲಿಸುವ ಸಣ್ಣ ಸಂಕೇತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರವಾಹ, ಜಲಪ್ರಳಯ, ಆಳವಾದ ನೀರಿನಲ್ಲಿ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗಳು ಸೇರಿದಂತೆ ಪ್ರತಿಯೊಂದು ತುರ್ತು ಸಂದರ್ಭಗಳಲ್ಲೂ SDRF ಸಿಬ್ಬಂದಿ ಜನರ ಜೀವ ಮತ್ತು ಆಸ್ತಿಪಾಸ್ತಿಯನ್ನು ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಅಪಾರ ಧೈರ್ಯ, ಶಿಸ್ತು, ಸಮರ್ಪಣಾ ಮನೋಭಾವ ಮತ್ತು ಯಾವುದೇ ಕ್ಷಣದಲ್ಲೂ ಸೇವೆಗೆ ಸಿದ್ಧವಾಗಿರುವ ಇಚ್ಛಾಶಕ್ತಿ ಇಡೀ ಸಮಾಜಕ್ಕೇ ಮಾದರಿಯಾಗಿದೆ. ಸಮಾಜದ ಸುರಕ್ಷತೆಗಾಗಿ ತಮ್ಮ ಜೀವವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುವ ಇಂತಹ ಮುಂಚೂಣಿ ಸಿಬ್ಬಂದಿಗೆ ಸದಾ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಎಸ್‌ಡಿಆರ್‌ಎಫ್ ಘಟಕದ ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಉತ್ಸಾಹವನ್ನು ಹೆಚ್ಚಿಸಲು ತಲಾ ಎರಡೆರಡು ಟೀ-ಶರ್ಟ್‌ಗಳನ್ನು ವಿಶೇಷವಾಗಿ ತಯಾರಿಸಿ ವಿತರಿಸಲಾಯಿತು. ಶಾಸಕರ ಹಾಗೂ ಫೌಂಡೇಶನ್‌ನ ಈ ಉದಾರ ಕೊಡುಗೆ ಮತ್ತು ಬೆಂಬಲವನ್ನು ಗೌರವಿಸಿ, SDRF ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಸಕ ಆಸೀಫ್ ಸೇಠ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
