Dharwad

ರಾಜಸ್ಥಾನದ ಜೈಪುರನಲ್ಲಿ ಕರ್ತವ್ಯದಲ್ಲಿದ್ದಾಗಲೇ ಧಾರವಾಡ ಗರಗ ಗ್ರಾಮದ ಯೋಧ ಸಾವು…

Share

ನಾಲ್ಕು ತಿಂಗಳು ಕಳೆದಿದ್ದರೆ ಧಾರವಾಡದ ಗರಗ ಗ್ರಾಮದ ಯೋಧ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಬರಬೇಕಾಗಿತ್ತು. ಆದರೆ ವಿಧಿಯಾಟ ಕರ್ತವ್ಯದಲ್ಲಿದಾಗ್ಲೇ ಗರಗ ಯೋಧನಿಗೆ ಹೃದಯಾಘಾತವಾಗಿ ಸಾವನಪ್ಪಿರುವ ಘಟನೆ ನಡೆದಿದ್ದು, ವಿಷಯ ತಿಳಿದು ಯೋಧ ನಿವಾಸಕ್ಕೆ ಭೇಟಿ ನೀಡಿ‌ದ ಮಾಜಿ‌ ಶಾಸಕ ಅಮೃತ ದೇಸಾಯಿ ಸಂತ್ವಾನ‌ ಹೇಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಹೌದು… ಧಾರವಾಡ ತಾಲೂಕಿನ ಗರಗ ಗ್ರಾಮದ ಸೈನಿಕ ವಸಂತರೆಡ್ಡಿಯವರು ಪ್ರಸ್ತುತ ರಾಜಸ್ಥಾನದ ಜೈಪುರನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.‌ ಆದರೆ ಇಂದು ಅವರಿಗೆ ಹೃದಯಾಘಾತದಿಂದ ಯೋಧ ಸಾವನಪ್ಪಿದ್ದಾರೆ. ನಾಲ್ವತೈದು ವರ್ಷದ ವಸಂತರಡ್ಡಿ ಕೆಂಚರಡ್ಡಿನವರ ಮೃತ ಯೋಧ, ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆಸಲ್ಲಿಸಿದ್ದರು. ಕೇವಲ‌ ನಾಲ್ಕು ತಿಂಗಳು ಕಳೆದಿದ್ದರೆ ಸೇವೆಯಿಂದ ನಿವೃತ್ತಿಯಾಗುತ್ತಿದ್ದರು.‌ ಆದರೆ ವಿಧಿಯಾಟ ಇಂದು ಹೃದಯಾಘಾತದಿಂದ ಯೋಧ ವಸಂತರಡ್ಡಿ ಇಲ್ಲವಾಗಿದ್ದಾರೆ. ಮಗನ ಕಳೆದುಕೊಂಡ ದುಃಖದಲ್ಲಿರುವ ಕುಟುಂಬಸ್ಥರನ್ನು ಗರಗ ಗ್ರಾಮದ ನಿವಾಸದಲ್ಲಿ ಭೇಟಿ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಕುಟುಂಬಕ್ಕೆ ಸಾಂತ್ವಾನ‌ಜತೆಗೆ ಧೈರ್ಯ ಹೇಳಿದ್ದು, ಮೃತ ಯೋಧನ ಪಾರ್ಥಿವ ಶರೀರ ಆಗಮನ ಅಂತ್ಯಕ್ರಿಯೆ ಕುರಿತು ಕುಟುಂಬಸ್ಥರ ಜತೆಗೆ ಚರ್ಚೆ ನಡೆಸಿದರು.

Tags:

error: Content is protected !!