Belagavi

ಬೆಳಗಾವಿಯಲ್ಲಿ ಆರ್ಟ್ ಆಫ್ ಲಿವಿಂಗ್‌ನಿಂದ ‘ಸಿಖ್ ಮತ್ತು ಹಿಂದೂ ಧರ್ಮದ ತೌಲನಿಕ ವಿಮರ್ಶೆ’ ಪ್ರವಚನ ಕಾರ್ಯಕ್ರಮ

Share

ಬೆಳಗಾವಿಯ ಹಿಂದಲಗಾದ ಎ.ಸಿ.ಪಿ.ಆರ್ ಗುರುದೇವ ರಾನಡೆ ಮಂದಿರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ವಿಶೇಷ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆಯ ಅಂತರರಾಷ್ಟ್ರೀಯ ವಕ್ತಾರ ಶ್ರೀ ಸುಜೀ ಭಯ್ಯಾ ಅವರು ‘ಸಿಖ್ ಮತ್ತು ಹಿಂದೂ ಧರ್ಮದ ತೌಲನಿಕ ವಿಮರ್ಶೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ವಕ್ತಾರ ಶ್ರೀ ಸುಜೀ ಭಯ್ಯಾ (ಸುಖವಿಂದ್ರಸಿಂಗ್ ಛಾಬ್ರಾ), ಆರಂಭದಲ್ಲಿ ಸಿಖ್ ಧರ್ಮ ಎಂಬುದು ಪ್ರತ್ಯೇಕವಾಗಿ ಇರಲಿಲ್ಲ, ಎಲ್ಲವೂ ಹಿಂದೂ ಧರ್ಮವೇ ಆಗಿತ್ತು ಮತ್ತು ನಂತರದ ದಿನಗಳಲ್ಲಿ ಅದು ಪ್ರತ್ಯೇಕ ಧರ್ಮವಾಯಿತು ಎಂದು ಅಭಿಪ್ರಾಯಪಟ್ಟರು. ‘ತನ್ನ ಮೂಲ ಧರ್ಮವನ್ನು ಅರಿಯದವರು ಬೇರಿಲ್ಲದ ಮರದಂತೆ ಉರುಳುತ್ತಾರೆ’ ಎಂದು ಹೇಳಿದ ಅವರು, ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಪರಿಣಾಮಕಾರಿ ಪ್ರವಚನ ನೀಡಿದರು. ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಯೋಜಕ ಹರ್ಷದ ಪತ್ರಾವಳಿ, ಆರತಿ ಆಪ್ಟೆ, ಸ್ವಾತಿ ಜೋಗ್, ಸುಹಾಸ ಜೋಶಿ ಹಾಗೂ ಇಂಜಿನಿಯರ್ ಭೀಮಸೇನ ಕುರಲಿ ಉಪಸ್ಥಿತರಿದ್ದರು.

Tags:

error: Content is protected !!