ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕ ಪಂಚಾಯಿತಿಯಲ್ಲಿ MGNRGA ಯೋಜನೆಯಡಿಯಲ್ಲಿ ತಾಂತ್ರಿಕ ಸಂಯೋಜಕರಾಗಿ ಕಾರ್ಯನಿರ್ವಾಹಹಿಸಿತ್ತಿರುವ ವಿಶ್ವನಾಥ ಹಟ್ಟಿಹೋಳಿ ಅವರಿಗೆ ಖಾನಾಪೂರ ಶಾಸಕರಾದ ವಿಠ್ಠಲರಾವ ಹಲಗೇಕರ ಅವರ ಆಪ್ತ ಕಾರ್ಯಕರ್ತರಾದ ಸುನಿಲ ಮಡ್ಡಿಮನಿ ಮತ್ತು ಶ್ರೀಕಾಂತ ಇಟಗಿ ಅವರು ಹಲವಾರು ದಿನಗಳಿಂದ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವದಲ್ಲದೆ ರಾಜಾರೋಷವಾಗಿ ಶಾಸಕರ ಹೆಸರನ್ನ ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುವದು ಧಮ್ಕಿ ಹಾಕುವದನ್ನ ಮಾಡುತ್ತಿದ್ದಾರೆಂದು ಅವರ ಮೇಲೆ ಖಾನಾಪೂರ ಪೋಲಿಸ್ ಠಾಣೆಯಲ್ಲಿ ವಿಶ್ವನಾಥ ಹಟ್ಟಿಹೋಳಿ ಅವರು ಮನನೊಂದು ದೂರು ನೀಡಿದ್ದಾರೆ

ಖಾನಾಪೂರ ತಾಲೂಕಿನಾಧ್ಯಂತ ರಸ್ತೆ ನೀರು ಚರಂಡಿಯಂತ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಸಾರ್ವಜನಿಕರು ಪ್ರತಿದಿನ ಶಾಸಕರಿಗೆ ಶಾಪ ಹಾಕುತ್ತಾ ಬದುಕು ಸಾಗಿಸುತ್ತಿದ್ದರೆ ಶಾಸಕರು ಮಾತ್ರ ಅವುಗಳ ಬಗ್ಗೆ ಗಮನ ಹರಿಸದೆ ತಮ್ಮ ಕಾರ್ಯಕರ್ತರಿಂದ ಹಣ ವಸೂಲಿ ದಂದೆ ಮಾಡುತ್ತಿದ್ದಾರಾ ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ ಮತ್ತು ವಿಶ್ವನಾಥ ಹಟ್ಟಿಹೋಳಿ ಅವರು ಹಣ ಕೊಡಲು ನಿರಾಕರಿಸಿದ್ದಕ್ಕೆ ಶಾಸಕರ ಪ್ರಭಾವ ಬಳಸಿ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪವು ಕೂಡಾ ದೂರಿನಲ್ಲಿ ನಮೂದಿಸಲಾಗಿದೆ ಆರೋಪವು ಪೋಲಿಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಇದರ ಕುರಿತಾಗಿ ಈಗಾಗಲೇ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಅವರು ತಕರಾರು ನೀಡಿದ್ದು ಇದರಲ್ಲೂ ಕೂಡಾ ನೊಂದ ವಿಶ್ವನಾಥ್ ಹಟ್ಟಿಹೊಳ್ಳಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಪೋಲಿಸ್ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ ಕಾದು ನೋಡಬೇಕಾಗಿದೆ
