ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಕೋಟಿ ಮೌಲ್ಯದ ಫೋನ್‌ಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ‘ಸಿಇಐಆರ್’ (CEIR) ಪೋರ್ಟಲ್ ತಂತ್ರಜ್ಞಾನದ ಸಹಾಯದಿಂದ ಬರೋಬ್ಬರಿ 46 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಇಂದು ಅವುಗಳನ್ನು ನಿಜವಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.


ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೀಡಿದ್ದ ದೂರುಗಳ ಆಧಾರದ ಮೇಲೆ, ಪಿಐ ಬಿ. ಆರ್. ಗಡ್ಡೇಕರ್ ನೇತೃತ್ವದಲ್ಲಿ ಪಿಎಸ್ಐಗಳಾದ ಆನಂದ ಆದಗೊಂಡ, ಶ್ರೀಶೈಲ ಹುಳಗೇರಿ, ಉದಯ ಪಾಟೀಲ, ಪಿ. ಎಂ. ಮೊಹಿತೆ ಹಾಗೂ ಸಿಬ್ಬಂದಿಗಳಾದ ಸಂದೀಪ ನಡುಗೇರಿ, ಮಹೇಶ ಮಳಗಲಿ, ಡಿ. ವೈ. ಮುರಗೋಡ, ಬಸವರಾಜ ಕುಳ್ಳೊಳ್ಳಿ ಮತ್ತು ತಾಂತ್ರಿಕ ಸಿಬ್ಬಂದಿ ರಮೇಶ ಅಕ್ಕಿ, ಮಹಾದೇವ ಕಾಸೇದ ಅವರನ್ನೊಳಗೊಂಡ ತಂಡವು ‘CEIR Portal’ ತಂತ್ರಜ್ಞಾನದ ಮೂಲಕ ಕಾರ್ಯಚರಣೆ ನಡೆಸಿ ಒಟ್ಟು 46 ಮೊಬೈಲ್‌ಗಳನ್ನು ಪತ್ತೆ ಹಚ್ಚಿದೆ. ಇಂದು (ಜುಲೈ 26, 2026) ಈ ಎಲ್ಲಾ ಮೊಬೈಲ್‌ಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸರ ಈ ಶ್ಲಾಘನೀಯ ಕಾರ್ಯಕ್ಕೆ ಬೆಳಗಾವಿ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
