ನಮ್ಮ ದೇಶದ ಸೈನಿಕರ ಶಕ್ತಿ ಅದ್ವಿತೀಯ. ನಮ್ಮ ಸೈನಿಕ ಬಲ ವಿಶ್ವದಲ್ಲೇ ಪ್ರಾಬಲ್ಯ ವಾದದ್ದು. ಕಾರ್ಗಿಲ್ ವಿಜಯ ರಾಷ್ಟ್ರ ಶಕ್ತಿಯ ಸಂಕೇತ ಎಂದು ನಿವ್ರತ್ತ ಪ್ರಾದ್ಯಾಪಕ ಸಿದ್ದಪ್ಪಾ ಹೊಳೆಯಾಚಿ ಹೇಳಿದರು.


ಅವರು ಭಾನುವಾರ ಅಕ್ಕತಂಗೇರಹಾಳ ದಲ್ಲಿ ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಜರುಗಿದ ಕಾರ್ಗಿಲ್ ವಿಜಯೋತ್ಸವ ಮತ್ತು ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ನೆಮ್ಮದಿಯ ಬದುಕಿಗೆ ಸೈನಿಕರ ಶ್ರಮ ಮತ್ತು ಸೇವೆ ಕಾರಣ. ಮಡದಿ,ಮಕ್ಕಳನ್ನು ಬಿಟ್ಟು ದೇಶ ಸೇವೆ ಈಶ ಸೇವೆ ಎಂದು ತಮ್ಮನ್ನು ದೇಶಕ್ಕೆ ಸಮರ್ಪಿಸಿಕೊಂಡ ಹಾಲಿ ಮತ್ತು ಮಾಜಿ ಸೈನಿಕರನ್ನು ಮತ್ತು ಯುದ್ಧದಲ್ಲಿ ಮಡಿದು ಹುತಾತ್ಮರಾದ ಸೇನಾನಿಗಳನ್ನು ನಿತ್ಯ ಸ್ಮರಿಸುವದಾಗಬೇಕು ಎಂದರು.
ನಿವ್ರತ್ತ ಉಪನ್ಯಾಸಕ ಎನ್ ಬಿ ಶೆಟ್ಟೆಣ್ಣವರ ಅವರು ಸೈನಿಕರ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಉದ್ಯಮಿ ಕಾಡಪ್ಪಾ ಪಾಟೀಲ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವೀರನಗೌಡಾ ಈಶ್ವರಪ್ಪಗೋಳ, ಎಸ್ ಬಿ ಉರಬಿನಹಟ್ಟಿ ಉಪಸ್ತಿತರಿದ್ದರು.
ವೀರ ನಾರಿಯರಾದ ಶೈಲವ್ವಾ ಬೆಣ್ಣಿ, ಶಾಂತವ್ವಾ ಮರಲಿಂಗನ್ನವರ, ಬಸಲಿಂಗವ್ವಾ ದೊಡಬಸನ್ನವರ, ಕಮಲವ್ವಾ ಪಂಗನ್ನವರ, ರೇಣುಕಾ ಇಂಗಳಗಿ, ಮಹಾದೇವಿ ಸತ್ತಿಗೇರಿ, ಮಾಜಿ ಸೈನಿಕರಾದ ಸಂಘದ ಅದ್ಯಕ್ಷ ಬಸವರಾಜ ಮರಲಿಂಗನ್ನವರ, ಉಪಾಧ್ಯಕ್ಷರಾದ ಲಗಾಮನ್ನಾ ಮಾವನೂರಿ, ನಿವ್ರತ್ತ ಸೈನಿಕರಾದ ಮಾರುತಿ ಪಾಟೀಲ, ಮಲ್ಲಪ್ಪಾ ನೇಸರಗಿ, ಬಸವರಾಜ ಮುಳಕೂರಿ, ಶಂಕರ ಅಕ್ಕತಂಗೇರಹಾಳ, ಬಸವರಾಜ ಅಲ್ಲನ್ನವರ, ಮಲ್ಲಪ್ಪಾ ನಿಕಾಲಿ, ಬಾಲಚಂದ್ರ ಕರಲಿಂಗನ್ನವರ, ವಿಜಯ ಖಾನಾಪುರಿ, ಮಲಗೌಡಾ ಭಾವಿಹಾಳ, ಅಡಿವೆಪ್ಪಾ ಮುಳಕೂರಿ, ಬಸವಂತಪ್ಪಾ ಸುಲಧಾಳ, ಅಶೋಕ ಅತ್ತು, ರಮೇಶ ಕರಲಿಂಗನ್ನವರ, ಪ್ರಕಾಶ ಶೆಟ್ಟೆಣ್ಣವರ, ಅಡಿವೆಪ್ಪಾ ದೊಡಬಸನ್ನವರ, ಅಡಿವೆಪ್ಪಾ ಮುಳಕೂರಿ, ಸೇರಿದಂತೆ
ಅಭಿಮಾನಿಗಳು, ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ಗುಂಡಪ್ಪಾ ಶೆಟ್ಟೆಣ್ಣವರ ನಿರೂಪಿಸಿದರು, ಸಂಘದ ಅದ್ಯಕ್ಷ ಬಸವರಾಜ ಮರಲಿಂಗನ್ನವರ ಸ್ವಾಗತಿಸಿದರು. ಉಪಾಧ್ಯಕ್ಷ ಲಗಾಮನ್ನಾ ಮಾವನೂರಿ ವಂದಿಸಿದರು.
