Belagavi

ಬೆಳಗಾವಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ: ಮರಾಠಾ ಮಂಡಳ ಪಾಲಿಟೆಕ್ನಿಕ್‌ನಿಂದ ವಿಶೇಷ ಅಭಿಯಾನ

Share

ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಮಹತ್ವದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ‘ಬೆಳಗಾವಿ ಧಾರವಾಡ ಟೋಲ್‌ವೇ ಲಿಮಿಟೆಡ್’ (BDTL) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.

ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್ ಸಂಸ್ಥೆಯು ಬೆಳಗಾವಿ ಧಾರವಾಡ ಟೋಲ್‌ವೇ ಲಿಮಿಟೆಡ್ (BDTL) ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ BDTL ಪ್ರಾಜೆಕ್ಟ್ ಹೆಡ್ ಶ್ರೀ ಎ. ಅರುಣ್‌ರಾಜ್ ಅವರು, ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಧರಿಸುವುದು ಮತ್ತು ಹೆದ್ದಾರಿ ಲೇನ್ ಶಿಸ್ತು ಪಾಲಿಸುವುದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ರಾಯಭಾರಿಗಳಾಗಿ

ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಆರ್. ಎಸ್. ಸೂರ್ಯವಂಶಿ ಅವರು ಈ ಜಂಟಿ ಉಪಕ್ರಮವನ್ನು ಶ್ಲಾಘಿಸಿ, ಯುವಕರ ಸುರಕ್ಷತೆಗೆ ಇಂತಹ ಅಭಿಯಾನಗಳು ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಆಶಾ ತೋರ್ವೆ, ಹಿರಿಯ ಪ್ರಾಧ್ಯಾಪಕ ಜಿ. ಕೆ. ಶಿವಯೋಗಿಮಠ, BDTL ಆಪರೇಷನ್ ಹೆಡ್ ಸುನಾರ್ ಮೈಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

Tags:

error: Content is protected !!