Belagavi

ಬೆಳಗಾವಿಯಲ್ಲಿ ಮೊಳಗಿದ ‘ವಂದೇ ಮಾತರಂ’: ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಬೃಹತ್ ಬೈಕ್ ರ್ಯಾಇಲಿ!

Share

ಕಾರ್ಗಿಲ್ ವಿಜಯೋತ್ಸವದ 27ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ದೇಶಭಕ್ತಿಯ ಅಲೆ ಎದ್ದಿದೆ. ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ನೇತೃತ್ವದಲ್ಲಿ ನಡೆದ ಬೃಹತ್ ಬೈಕ್ ರ್ಯಾ ಲಿಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ವತಿಯಿಂದ ನಗರದಲ್ಲಿ ಎರಡು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷ ಜಗದೀಶ ಪೂಜೇರಿ ನೇತೃತ್ವದಲ್ಲಿ ಈ ವಿಜಯೋತ್ಸವ ಆಯೋಜನೆಯಾಗಿದ್ದು, ಮೊದಲ ದಿನವಾದ ಶನಿವಾರ (ಜುಲೈ 25) ನಗರದಲ್ಲಿ ಅತ್ಯಂತ ಅದ್ದೂರಿಯಾಗಿ ಬೃಹತ್ ಬೈಕ್ ರ್ಯಾ ಲಿ ಜರುಗಿತು. ಗೋವಾವೇಸ್’ನ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಈ ರ್ಯಾಿಲಿಯು ಧರ್ಮನಾಥ ಭವನದವರೆಗೆ ವೈಭವದಿಂದ ಸಾಗಿತು.

ಈ ರ್ಯಾಿಲಿಯಲ್ಲಿ ಮಾಜಿ ಸೈನಿಕರು, ರೈತ ಸಂಘಟನೆಯ ಪದಾಧಿಕಾರಿಗಳು, ಮಹಿಳೆಯರು ಹಾಗೂ ಯುವಜನತೆ ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಯೋಧರ ಪರ ಜಯಘೋಷ ಕೂಗಿದರು. 1999ರ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿದ 500ಕ್ಕೂ ಹೆಚ್ಚು ಅಮರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಹಾಗೂ ಯುವ ಪೀಳಿಗೆಯಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟನೆಯ ಮುಖಂಡರು ಇದೇ ವೇಳೆ ತಿಳಿಸಿದರು.

ಗಡಿಯಲ್ಲಿ ಸೈನಿಕರು ಹಗಲು-ರಾತ್ರಿ ಕಾವಲು ಕಾಯುವುದರಿಂದಲೇ ನಾವಿಲ್ಲಿ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ, ಹಾಗಾಗಿ ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮುಖಂಡರು ಹೇಳಿದರು. ಈ ಸಂದರ್ಭದಲ್ಲಿ ರಮೇಶ್ ಬೌಗಲೆ, ಮಡಿವಾಲಪ್ಪ ಕಲಭಾವಿ, ಅಶೋಕ್ ಮಜಗಿ, ಚಂದ್ರಶೇಖರ್ ಸವದಿ, ಕವಿತಾ ಮಿಶ್ರಾ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ರ್ಯಾಬಲಿಗೆ ಮೆರುಗು ನೀಡಿದರು.

Tags:

error: Content is protected !!